ಹೆಬ್ರಿ: ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಈರ್ವರನ್ನು ಬಂಧಿಸಿ ಪ್ರಕರಣ ದಾಖಲಾದ ಘಟನೆ ಮೇ. 20ರಂದು ವರದಿಯಾಗಿದೆ.
ಬ್ರಹ್ಮಾವರ ನಾಲ್ಕೂರು ಗ್ರಾಮದ ಚಂದಾಲ್ ಕಟ್ಟೆ ಗೇರು ಪ್ಲಾಂಟೇಷನ್ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ಬಗ್ಗೆ ಮಾಹಿತಿ ಮೇರೆಗೆ ಪಿಎಸ್‌ಐ ರವಿ ಬಿ. ಕೆ. ಯವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಶೇಖರ ಪೂಜಾರಿ ಹಾಗೂ ಬಸವ ಕುಲಾಲ್ ರವರನ್ನು ವಶಕ್ಕೆ ಪಡೆದಿದ್ದಾರೆ.
ಜೂಜಾಟಕ್ಕೆ ಬಳಸಿದ ಅಂದಾಜು 2800 ಬೆಲೆಯ ನಾಲ್ಕು ಕೋಳಿ ಹುಂಜ, ಕೋಳಿ ಬಾಳು-3 ಹಾಗೂ ಕೈ ಚೀಲ – 4, ನಗದು 1000 ಹಾಗೂ ಟಾರ್ಚ್ -1ನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
