ಅಜೆಕಾರು: ಮರ್ಣೆ ಗುಡ್ಡೆಯಂಗಡಿ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಮಗುಚಿ ಬಿದ್ದ ಘಟನೆ ಮೇ. 26ರಂದು ನಡೆದಿದೆ.
ಕಾರಿನ ಚಾಲಕ ಜಗದೀಶ್ ಶೆಟ್ಟಿ, ಆಯುಶ್ ಶೆಟ್ಟಿ ಹಾಗೂ ಸತ್ಯ ಶಂಕರ್‌ರೊಂದಿಗೆ ಅಜೆಕಾರಿನಿಂದ ಕಾಡುಹೊಳೆ ಕಡೆಗೆ ಹೋಗುತ್ತಿದ್ದಾಗ ಚಾಲಕನ ನಿರ್ಲಕ್ಷ್ಯತನದಿಂದ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ನೀರು ಹೋಗುವ ಚರಂಡಿಯಲ್ಲಿ ಮಗುಚಿ ಬಿದ್ದಿದೆ.
ಕಾರಿನಲ್ಲಿದ್ದ ಸತ್ಯ್ ಶಂಕರ್ ಗಾಯಗೊಂಡು, ಕಾರು ಜಖಂಗೊಂಡಿರುತ್ತದೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
