ಕಾರ್ಕಳಹೆಬ್ರಿ

ಮುದ್ರಾಡಿಯಲ್ಲಿ ಎಸ್. ಎಸ್. ಎಲ್. ಸಿ. ಮತ್ತು ಪಿ. ಯು. ಸಿ. ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಹೆಬ್ರಿ:ಯುವಕರ ಕಣ್ಮಣಿ, ದೇಶಪ್ರೇಮಿ ಮಾಧವ ಮುದ್ರಾಡಿ ಸ್ಮರಣಾರ್ಥ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮುದ್ರಾಡಿ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಸಮಾಜ ಸೇವಕರಾದ ಗಣಪತಿ ಎಂ. ಹಾಗೂ ಕುಟುಂಬಿಕರು ಗುರುತಿಸಿ ಸನ್ಮಾನಿಸಿದರು.

ಮುದ್ರಾಡಿ -ಕಬ್ಬಿನಾಲೆ ವ್ಯಾಪ್ತಿಯ 21 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಹೆಬ್ರಿ ಅಮೃತ ಭಾರತಿ ಟ್ರಸ್ಟಿನ ಅಧ್ಯಕ್ಷರಾದ ಸಿ.ಎ. ಎಂ. ರವಿ ರಾವ್, ಉದ್ಯಮಿ ಕನ್ಯಾನ ಲಕ್ಷ್ಮೀನಾರಾಯಣ ನಾಯಕ್, ಧಾರ್ಮಿಕ ಮುಖಂಡರಾದ ಪ್ರಮೀಳಾ ಹರೀಶ್, ದಾನಿಗಳಾದ ಶ್ರೀಧರ ಶೆಟ್ಟಿ ಪುಷ್ಯರಾಗ ಮುದ್ರಾಡಿ, ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಸನತ್ ಕುಮಾರ್ ಮತ್ತು ಸಂತೋಷ್ ಶೆಟ್ಟಿ ಉಪ್ಪಳ, ಪ್ರಕಾಶ್ ರಾವ್ ಮುದ್ರಾಡಿ, ಯಶೋದಾ ಶೆಟ್ಟಿ ಮುದ್ರಾಡಿ, ಪ್ರಶಾಂತ್ ಪೈ ಮುದ್ರಾಡಿ, ಪ್ರವೀಣ್ ಪೂಜಾರಿ, ಮಕ್ಕಳ ಪೋಷಕರು, ಅಭಿಮಾನಿಗಳು ಉಪಸ್ಥಿತರಿದ್ದರು.

ಗಣಪತಿ ಎಂ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

ಮುದ್ರಾಡಿಯಲ್ಲಿ ಮಾದಕ ವ್ಯಸನ ಜಾಗೃತಿ ಕಾರ್ಯಾಗಾರ

Madhyama Bimba

ಪಳ್ಳಿ: 80ನೇ ಸ್ವಾತಂತ್ರ್ಯ ದಿನಾಚರಣೆ

Madhyama Bimba

ಮುದ್ರಾಡಿ ಪ್ರೌಢಶಾಲೆಯಲ್ಲಿ ನೇತಾಜಿ ಮತದಾರರ ಕ್ಲಬ್ ಆಶ್ರಯದಲ್ಲಿ ಶಾಲಾ ಸಂಸತ್ತು ಚುನಾವಣೆ 

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More