ಕಾರ್ಕಳಹೆಬ್ರಿ

ಹಿರಿಯಡ್ಕ ಓಂತಿಬೆಟ್ಟು ಬಳಿ ಲಾರಿ – ಬೈಕ್ ನಡುವೆ ಅಪಘಾತ- ಗಾಯಗೊಂಡ ಬೈಕ್ ಸವಾರ

ಕಾರ್ಕಳ: ಹಿರಿಯಡ್ಕ ಓಂತಿಬೆಟ್ಟು ಬಳಿ ಲಾರಿ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮೇ. 27ರಂದು ನಡೆದಿದೆ.

ಯರ್ಲಪಾಡಿಯ ಪುಷ್ಕರ್ ಪೂಜಾರಿ ಗಾಯಗೊಂಡ ಬೈಕ್ ಸವಾರ.

ಈತ ಬೈಲೂರಿನಿಂದ ಉಡುಪಿಗೆ ಹೋಗುತ್ತಿರುವಾಗ ಬೆಳಿಗ್ಗೆ ಗಂಟೆ ೭.೧೫ರ ಸುಮಾರಿಗೆ ಓಂತಿಬೆಟ್ಟು ಪ್ರಗತಿ ಪೈಂಟ್ ಶಾಪ್ ಬಳಿವಿರುದ್ದ ದಿಕ್ಕಿನಿಂದ KA-20-D-0331 ಲಾರಿ ಚಾಲಕ ಶಿವಲಿಂಗಯ್ಯ ತನ್ನ ಲಾರಿಯನ್ನು ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ ಹೋಗುವ ರಸ್ತೆಗೆ ಹೋಗಲು ಲಾರಿಯನ್ನು ಒಮ್ಮೆಲೇ ತಿರುಗಿಸಿದ ಪರಿಣಾಮ ಲಾರಿಯ ಹಿಂಭಾಗ ಪುಷ್ಕರ್ ಪೂಜಾರಿಯವರು ಚಲಾಯಿಸುತ್ತಿದ್ದ ಮೋಟಾರು ಸೈಕಲ್‌ಗೆ ತಾಗಿ ಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ.

ಅಪಘಾತದ ರಭಸಕ್ಕೆ ತಲೆಗೆ ಮತ್ತು ಕೈಕಾಲುಗಳಿಗೆ ಗಾಯವಾಗಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕರಕರಿ ಫ್ರೆಂಡ್ಸ್ ಸೇವಾ ಬಳಗದ ಕರಕರಿ ಫ್ರೆಂಡ್ಸ್ ಸಂಭ್ರಮ ಮತ್ತು ಸಾಧಕರಿಗೆ ಸನ್ಮಾನ

Madhyama Bimba

ಮುದ್ರಾಡಿ : ಉಪ್ಪಳದಲ್ಲಿ ಧರ್ಮಸ್ಥಳ ಯೋಜನೆಯ ” ವಾತ್ಸಲ್ಯ ಮನೆ” ಹಸ್ತಾಂತರ – ಗ್ರಹಪ್ರವೇಶ

Madhyama Bimba

ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ಕಾರ್ಕಳದಲ್ಲಿ ಚಿಲಿಪಿಲಿ-2026

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More