Blog

ಪುರಸಭೆ ವಿರುದ್ಧ ವಿಶೇಷ ಪ್ರತಿಭಟನೆ

ಪುರಸಭೆ ವಿರುದ್ಧ ವಿಭಿನ್ನ ಪ್ರತಿಭಟನೆ! ಜಲಪಾತದ ನೀರಿನಲ್ಲಿ ಸ್ನಾನ ಮಾಡಿದ ಪ್ರಕಾಶ್ ರಾವ್

!ಪುರಸಭೆ ಕಟ್ಟಡದ ಮೇಲ್ಚಾವಣಿಯಿಂದ ಮಳೆನೀರು ಸರಿಯಾಗಿ ಹರಿದು ಹೋಗುವ ವ್ಯವಸ್ಥೆ ಕಳೆದ ಎರಡು ವರ್ಷಗಳಿಂದ ಹಾನಿಗೀಡಾಗಿದ್ದು, ನೀರು ಜಲಪಾತದಂತೆ ರಭಸವಾಗಿ ಕೆಳಗೆ ಬೀಳುತ್ತಿದೆ. ಈ ಸಮಸ್ಯೆಯನ್ನು ಸ್ಥಳೀಯರು ಹಾಗೂ ಅಂಗಡಿ ಮಾಲೀಕರು ಹಲವು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಈ ವಿಷಯವನ್ನು ಪುರಸಭೆಯ ಮಾಜಿ ಸದಸ್ಯ ಪ್ರಕಾಶ್ ರಾವ್ ಅವರ ಗಮನಕ್ಕೆ ತಂದ ನಂತರ, ಅವರು ಕೂಡ ಹಲವು ಬಾರಿ ಪುರಸಭೆಗೆ ಮನವಿ ಸಲ್ಲಿಸಿದರು. ಆದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಇಂದು ಅವರು ಜಲಪಾತದಂತೆ ಹರಿಯುತ್ತಿದ್ದ ನೀರಿನ ಕೆಳಗೆ ನಿಂತು ಸ್ನಾನ ಮಾಡುವ ಮೂಲಕ ವಿನೂತನ ಶೈಲಿಯಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ವೇಳೆ ಪುರಸಭೆಯ ನಿರ್ಲಕ್ಷ್ಯ ಮತ್ತು ಕಾಮಗಾರಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಶೀಘ್ರದಲ್ಲೇ ಸಮಸ್ಯೆ ಪರಿಹರಿಸದಿದ್ದರೆ ಮೇಲಧಿಕಾರಿಗಳು ಹಾಗೂ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Related posts

ಕಾರ್ಕಳ ತಾಲೂಕು ಅಟೋ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾಗಿ ಸದಾನಂದ ಸಾಲಿಯಾನ್ ಆಯ್ಕೆ

Madhyama Bimba

ಕಾರ್ಕಳ: ಕಣಜದ ಹುಳು ದಾಳಿ: ಮಹಿಳೆ ಸಾವು  

Madhyama Bimba

ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಕಾವ್ಯ ಶ್ರೀ ಅಜೇರು – ಉಮೇಶ್ ಮಿಜಾರ್ ಗೆ ಕಲಾ ಭೂಷಣ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More