ಕಾರ್ಕಳದ ಕಾವೇರಡ್ಕದ 19 ವರ್ಷದ ಯುವತಿಯೋರ್ವಳಿಗೆ ಬಜಗೋಳಿಯ ಯುವಕನೋರ್ವ ಹೊಡೆದು, ಜೀವ ಬೆದರಿಕೆ ಹಾಕಿದ್ದು ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಬಜಗೋಳಿಯ ಸಚಿತ್ ಎಂಬಾತ ಇನ್‌ಸ್ಟ್ರಾಗ್ರಾಂನಲ್ಲಿ ಕಳೆದ ಒಂದು ವರ್ಷಗಳ ಹಿಂದೆ ಪರಿಚಯವಾಗಿದ್ದ. ಬಳಿಕ ಆಕೆಯೊಂದಿಗೆ ವಾಟ್ಸಾಪ್‌ನಲ್ಲಿ ಮಾತನಾಡುತ್ತಿದ್ದ.
ಜುಲೈ 15ರಂದು ಆಕೆಯನ್ನು ಕಾರ್ಕಳದ ಬಸ್‌ನಿಲ್ದಾಣದ ಮೆಡಿಕಲ್‌ಗೆ ಬರುವಂತೆ ತಿಳಿಸಿ ಬಳಿಕ ಆಕೆಯನ್ನು ಕಾರ್ಕಳದ ಕಿಂಗ್ಸ್ ಬಾರ್‌ಗೆ ಊಟಕ್ಕಾಗಿ ಕರೆದು ಕೊಂಡು ಹೋಗಿದ್ದ. ಕಿಂಗ್ಸ್ ಬಾರ್‌ನಲ್ಲಿ ಆಕೆಯೊಂದಿಗೆ ಜಗಳ ಮಾಡಿ ಬೇ.. ಸೂ.. ಎಂದು ಅವಾಚ್ಯ ಶಬ್ದಗಳಿಂದ ಬೈದು, ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಿ, ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ.
ಬಂಟ್ವಾಳದಲ್ಲಿ ನಡೆದ ಯುವತಿಯ ಕೊಲೆ ಪ್ರಕರಣದ ಬಳಿಕ ಈ ಘಟನೆ ಕೂಡಾ ಸಾಮಾಜಿಕ ವಲಯದಲ್ಲಿ ತಲ್ಲಣ ಮೂಡಿಸಿದೆ.
