ಮೂಡುಬಿದಿರೆ

  ಕಿಶೋರ್ ಅತ್ಯುತ್ತಮ ನಿರ್ದೇಶಕ

ಪ್ರಜಾವಾಣಿ’ ದೈನಿಕ ಬಳಗವು ಕೊಡಮಾಡುವ ‘ ಪ್ರಜಾವಾಣಿ ಸಿನಿ ಸಮ್ಮಾನ’ ಗೌರವಕ್ಕೆ ಚಿತ್ರ ನಿರ್ದೇಶಕ, ಮೂಡುಬಿದಿರೆ ಮೂಡುಕೊಣಾಜೆಯ ಕಿಶೋರ್ ಮೂಡುಬಿದಿರೆ ಅವರು ‘ ಅತ್ಯುತ್ತಮ ನಿರ್ದೇಶಕ’ ರಾಗಿ ಆಯ್ಕೆಯಾಗಿದ್ದಾರೆ.

ಕಿಶೋರ್ ಅವರು ನಿರ್ದೇಶಿಸಿರುವ ‘ ರಿಪ್ಪನ್ ಸ್ವಾಮಿ’ ಚಿತ್ರದ ನಿರ್ದೇಶನಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ.

ಹಿರಿತೆರೆ, ಕಿರುತೆರೆಯ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವ ಕಿಶೋರ್ ಅವರು 2011 ರಲ್ಲಿ ಕಲಾ ನಿರ್ದೇಶಕ ಚೇತನ್ ಮುಂಡಾಡಿ ಅವರ ತಂಡದಲ್ಲಿ ಸೆಟ್ ಬಾಯ್ ಆಗಿ ಕೆಲಸ ಪ್ರಾರಂಭಿಸಿ ಆ ಬಳಿಕ ಸಹ, ಸಹಾಯಕ ನಿರ್ದೇಶಕರಾಗಿದ್ದರು.

12 ತುಳು ಸಿನೆಮಾಗಳಲ್ಲಿ ಸಹ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅವರು 2020 ರಲ್ಲಿ ವಿಜಯ ರಾಘವೇಂದ್ರ ಅವರಿಗೆ ‘ ಮಾಲ್ಗುಡಿ ಡೇಸ್ ‘ ಚಿತ್ರ ನಿರ್ದೇಶಿಸಿದ್ದಾರೆ.
‌ ‘ಅಪ್ಪೆ ಟೀಚರ್’ ಎಂಬ ತುಳು ಹಾಸ್ಯಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಇವರದ್ದು ‘ರಿಪ್ಪನ್ ಸ್ವಾಮಿ’ ಮೂರನೇ ಸಿನೆಮಾ.

ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರು ನಟಿಸಿದ್ದು ಅವರಿಗೂ ‘ ಬೆಸ್ಟ್ ಆಕ್ಟರ್’ ಪ್ರಶಸ್ತಿ ಲಭಿಸಿದೆ. ಅಲ್ಲದೆ ಬೆಸ್ಟ್ ಎಡಿಟರ್ ಪ್ರಶಸ್ತಿಯನ್ನು ಶಶಾಂಕ್ ನಾರಾಯಣ್ ಹಾಗೂ ಬೆಸ್ಟ್ ಪ್ಲೇ ಬ್ಯಾಕ್ ಸಿಂಗರ್ ಪ್ರಶಸ್ತಿಯನ್ನು ಸಿದ್ಧಾರ್ಥ್ ಬೆಳ್ಮಣ್ಣು ಅವರು ಪಡೆದಿದ್ದಾರೆ.

Related posts

ಮೂಡುಬಿದಿರೆಯಲ್ಲಿ ಗಾಂಧಿ ಸ್ಮೃತಿ ಮತ್ತು ಪಾನ ಮುಕ್ತರ ಸಮಾವೇಶ- ದುಶ್ಚಟದಿಂದ ಮುಕ್ತರಾಗಿ : ಮಾಜಿ ಸಚಿವ ಅಭಯಚಂದ್ರ ಕರೆ

Madhyama Bimba

ಮಹಾವೀರ ಕಾಲೇಜುನಲ್ಲಿ ಉದ್ಯೋಗ ಮಾರ್ಗದರ್ಶನ

Madhyama Bimba

ಪಣಪಿಲ ಶ್ರೀ ರಾಜ್ ಮತ್ಸ್ಯ ಫಾರ್ಮ್ ನಲ್ಲಿ ಮೀನು ಹಿಡಿಯುವುದು ಮತ್ತು ಮಾರಾಟ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More