ಹೆಬ್ರಿ: ಅಲಯನ್ಸ್ ಕ್ಲಬ್ ಹೆಬ್ರಿ, ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ, ಮಕ್ಕಳಿಗೆ ಕ್ರಾಫ್ಟ್ ತರಗತಿಯ ಉದ್ಘಾಟನಾ ಕಾರ್ಯಕ್ರಮವು ಜೂ.4 ರಂದು ಮುದ್ರಾಡಿ ನೆಲ್ಲಿಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಹೆಬ್ರಿ ಅಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಬಾಲಚಂದ್ರ ಎಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕ ರವೀಂದ್ರ ಹೆಗ್ಡೆ, ಅಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಕಬ್ಬಿನಾಲೆ ರಾಮಚಂದ್ರ ಭಟ್, ಸಂಪನ್ಮೂಲ ವ್ಯಕ್ತಿ ಪೇಮಾ ಪಾಟೇಲ್, ಹಿರಿಯ ಶಿಕ್ಷಕಿ ಶೋಭಾ ಕೆ ಭಟ್, ನಂದಿನಿ, ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಇದರ ಕೋಶಾಧಿಕಾರಿ ಅಮೃತ ಆರ್ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮಕ್ಕಳಿಗೆ ಪ್ರತೀ ಗುರುವಾರ ಪಠ್ಯೇತರ ಚಟುವಟಿಕೆಗಳ ಅಂಗವಾಗಿ ಒಂದು ಗಂಟೆ ಕ್ರಾಫ್ಟ್ ತರಗತಿ ನಡೆಯಲಿದೆ ಜೊತೆಗೆ ಬೇಡಿಕೆ ಇದ್ದಲ್ಲಿ ಹೆಬ್ರಿ ತಾಲ್ಲೂಕಿನ ಇತರ ಶಾಲೆಗಳಲ್ಲೂ ಕ್ರಾಫ್ಟ್ ತರಗತಿಯನ್ನು ನಡೆಸಲಾಗುವುದು ಎಂದು ಸಂಪನ್ಮೂಲ ವ್ಯಕ್ತಿಯಾದ ಪ್ರೇಮ ಪಾಟೀಲ್ ಹೇಳಿದರು.
ಶಾಲಾ ಶಿಕ್ಷಕಿಯರು, ಪೋಷಕರು, ಮಕ್ಕಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ರವೀಂದ್ರ ಹೆಗ್ಡೆ ಸ್ವಾಗತಿಸಿದರು. ಅಮೃತ ಕಾರ್ಯಕ್ರಮ ನಿರೂಪಿಸಿದರು. ಶೋಭಾ ಭಟ್ ವಂದಿಸಿದರು.
