ಕಾರ್ಕಳ

ಆರ್‌ಸಿಸಿ ಗುತ್ತಿಗೆದಾರ ಸಂಘದ ಅಧ್ಯಕ್ಷರಾಗಿ ದಾಮೋದರ ಆಚಾರ್ಯ

ಕಾರ್ಕಳ ಹೆಬ್ರಿ ವಲಯ ಆರ್‌ಸಿಸಿ ಗುತ್ತಿಗೆದಾರರ ಸಂಘದ ವಾರ್ಷಿಕ ಮಹಾಸಭೆಯು ಕಾರ್ಕಳ ಪ್ರಕಾಶ್ ಹೋಟೆಲ್ ಸಭಾಭವನದಲ್ಲಿ ಅ.೨೫ರಂದು ನಡೆಯಿತು.

ಮಹಾಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘದ ಅಧ್ಯಕ್ಷರಾಗಿ ಕೋಟ ದಾಮೋದರ ಆಚಾರ್ ಕಾರ್ಕಳ ಇವರು ಒಂಬತ್ತನೆ ಬಾರಿ ಅಧ್ಯಕ್ಷರಾಗಿ ಪುನರ್ ಆಯ್ಕೆಯಾದರು.

ಗೌರವಾಧ್ಯಕ್ಷರುಗಳಾಗಿ ಸಯ್ಯದ್ ಯುನೂಸ್, ಗೋಪಾಲ ಅಂಚನ್, ರಮೇಶ್ ಆಚಾರ್ಯ, ಉದಯ ಆಚಾರ್ಯ, ಉಪಾಧ್ಯಕ್ಷರಾಗಿ ಅಶೋಕ್ ಸುವರ್ಣ, ಶಂಕರ ಆಚಾರ್ಯ, ಕಾರ್ಯದರ್ಶಿಯಾಗಿ ಚಂದ್ರಶೇಖರ್ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ನದೀಮ್, ಕೋಶಾಧಿಕಾರಿಯಾಗಿ
ಅಬ್ದುಲ್ ರೆಹಮಾನ್, ಸಮಸ್ಯೆ ಪರಿಹಾರ ಕಾರ್ಯದರ್ಶಿಯಾಗಿ ರವಿ ಸಾಸ್ತಾನ, ಕ್ರೀಡಾ ಕಾರ್ಯದರ್ಶಿಯಾಗಿ ಗಣೇಶ್ ಹಾಗೂ ಸಂತೋಷ್,
ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಶಾಂತ್ ಆಚಾರ್ಯ, ಸಂಘಟನಾ ಕಾರ್ಯದರ್ಶಿಯಾಗಿ ರೋಹಿತ್ ಹಾಗೂ ರಜಬ್ ಆಯ್ಕೆಯಾದರು.

ಈ ಸಂದರ್ಭದಲ್ಲಿ ಸಂಘ ಸ್ಥಾಪನೆಯಲ್ಲಿ ಸಹಕರಿಸಿದ ಹಿರಿಯ ಸದಸ್ಯ ಸಯ್ಯದ್ ಯುನೂಸ್‌ರನ್ನು ಸನ್ಮಾನ ಮಾಡಲಾಯಿತು.

Related posts

ಜೇಸಿ ಇಂಟರ್ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ

Madhyama Bimba

ಬೈಲೂರು: ಬಸ್ರಿ ಶಾಲಾ ಮಕ್ಕಳಿಗೆ ದಾನಿಗಳಿಂದ ಉಚಿತ ನೋಟ್ ಪುಸ್ತಕ ವಿತರಣೆ

Madhyama Bimba

ಕಡ್ತಲ ಅಂಗನವಾಡಿ ಮಕ್ಕಳಿಗೆ ಬ್ಯಾಗ್ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More