ಕಾರ್ಕಳ

ಕಾರ್ಕಳ ಮೈನ್: ಶಾಲಾ ನವೀಕರಣ, ಸಮವಸ್ತ್ರ ಮತ್ತು ಬ್ಯಾಗ್ ವಿತರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್ ಇಲ್ಲಿ ಮಾನಸ ಪ್ರಾಪರ್ಟೀಸ್ ಜೋಡುರಸ್ತೆ ಕಾರ್ಕಳ ಹಾಗೂ ಮೇಕ್ ಸಂ ೧ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ಇವರ ವತಿಯಿಂದ ಶಾಲಾ ನವೀಕರಣದ ಅನಾವರಣ ನಡೆಯಿತು.

ಈ ಸಂದರ್ಭದಲ್ಲಿ ಮೇಕ್ ಸಂ 1 ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಸಮವಸ್ತ್ರ ವಿತರಿಸಲಾಯಿತು.

ಪುರಸಭಾ ಮಾಜಿ ಸದಸ್ಯ ಹಾಗೂ ಶಾಲೆಯ ಪೂರ್ವ ವಿದ್ಯಾರ್ಥಿ ಪ್ರದೀಪ್ ರಾಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಪುರಸಭೆ ಮಾಜಿ ಅಧ್ಯಕ್ಷೆ ಹಾಗೂ ವಾರ್ಡ್ ಸದಸ್ಯೆ ಸುಮಾ ಕೇಶವ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಅಧ್ಯಕ್ಷೆ ಹಾಗೂ ಡಾ. ಬಿ. ಆರ್.ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ಪ್ರತಿಮಾ ರಾಣೆ, ’ಚರಿತ್ರೆ’ ಯೂ ಟ್ಯೂಬ್ ಚಾನಲ್ ನ ಯೂಟ್ಯೂಬರ್ ನಿತಿನ್, ಸಿ.ಆರ್.ಪಿ ಜ್ಯೋತಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಮಾಲಾಶ್ರೀ, ಮೇಕ್ ಸಂ 1 ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ನ ಸದಸ್ಯರು, ವಿದ್ಯಾರ್ಥಿಗಳ ಪೋಷಕರು, ಶಾಲಾ ಶಿಕ್ಷಕಿಯರಾದ ಮಧುಶ್ರೀ, ವಾಣಿ, ಅಶ್ವಿನಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯೂಟ್ಯೂಬರ್ ನಿತಿನ್ ಇವರನ್ನು ಸನ್ಮಾನಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮೇಕ್ ಸಂ1ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡದ ಸದಸ್ಯ ಗುರುಪ್ರಸಾದ್ ಶೆಟ್ಟಿ ತಂಡವನ್ನು ಪರಿಚಯಿಸಿದರು. ಹಿರಿಯ ಸಹ ಶಿಕ್ಷಕಿ ಸವಿತ ವಂದಿಸಿದರು. ಪದವೀಧರ ಸಹ ಶಿಕ್ಷಕಿ ಪ್ರತಿಮಾ. ಎಸ್ ನಿರೂಪಿಸಿದರು.

Related posts

ಜೂ. 3ರಂದು ಶಿರ್ಲಾಲು ಶಾಲೆಯಲ್ಲಿ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ – ಸಾಧಕ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಪ್ರದಾನ 

Madhyama Bimba

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : “ಹೊಂಗನಸು” ವಿಶೇಷ ಕಾರ್ಯಕ್ರಮ

Madhyama Bimba

ಕ್ರೈಸ್ಟ್‌ಕಿಂಗ್‌ನಲ್ಲಿ ವರ್ಟೆಕ್ಸ್ ವೆಂಚರ್ – 2026 ಬೇಸಿಗೆ ಶಿಬಿರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More