ಕಾರ್ಕಳ

ಕಾರ್ಕಳ: ಟೆಂಪೋ ಚಾಲಕನಿಗೆ ಹಲ್ಲೆ- ಜೀವ ಬೆದರಿಕೆ

ಕಾರ್ಕಳ: ನಿಟ್ಟೆ ದೂಪದಕಟ್ಟೆ ಬಳಿ ಟೆಂಪೋ ಚಾಲಕನಿಗೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ ಘಟನೆ ಜೂ. 12ರಂದು ವರದಿಯಾಗಿದೆ.

ನಿಟ್ಟೆ ಗ್ರಾಮದ ಮೊಹಮ್ಮದ್ ಶಬೀಬ್ (24) ತಮ್ಮ ಅಬ್ದುಲ್ ಮಲಿಕ್‌ನೊಂದಿಗೆ ಟೆಂಪೋದಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾಗ ಮಹಮ್ಮದ್ ಹುನೈಸ್ ಎಂಬಾತನು ಅನೀಸ್ ಮತ್ತು ಶಿಯಾನ್‌ರೊಂದಿಗೆ ಕಾರಿನಲ್ಲಿ ಟೆಂಪೋವನ್ನು ಹಿಂಬಾಲಿಸಿಕೊಂಡು ಬಂದು ಹೊಡೆಯಲು ಬ್ಯಾಟ್ ತೋರಿಸಿದ್ದಾನೆ. ಮೊಹಮ್ಮದ್ ಶಬೀಬ್ ಹೆದರಿ ತನ್ನ ಟೆಂಪೋವನ್ನು ತಿರುಗಿಸಿ ವಾಪಾಸು ಮನೆ ಕಡೆ ಹೋಗುತ್ತಿರುವಾಗ ಮಹಮ್ಮದ್ ಹುನೈಸ್ ಹಿಂಬಾಲಿಸಿಕೊಂಡು ಬಂದು ಕಾರನ್ನು ಟೆಂಪೋಗೆ ಡಿಕ್ಕಿ ಹೊಡೆದು ಗಾಜನ್ನು ಬ್ಯಾಟಿನಿಂದ ಒಡೆದು, ಅವಾಚ್ಯ ಶಬ್ದಗಳಿಂದ ಬೈದು ಬ್ಯಾಟಿನಿಂದ ಹೊಡೆದು, ಕಾಲಿನಿಂದ ತುಳಿದು ಕೊಲ್ಲುವುದಾಗಿ ಜೀವಬೆದರಿಕೆ ಹಾಕಿರುತ್ತಾನೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಇಂಡಿಪೆಂಡೆನ್ಸ್ ಫುಟ್ಬಾಲ್ ಕಪ್: ಜೇಸಿ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ

Madhyama Bimba

ವಿದ್ಯಾರ್ಜನೆಯಲ್ಲಿ ಹಠ ಸಾಧಿಸುವವರಾಗಬೇಕು

Madhyama Bimba

ಕಾರ್ಕಳ: ಮದ್ಯವ್ಯಸನಿ ನೇಣು ಬಿಗಿದು ಆತ್ಮಹತ್ಯೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More