ಕಾರ್ಕಳ

ಕಾರ್ಕಳ: ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿ-ಗಾಯ

ಕಾರ್ಕಳ: ಕಾರ್ಕಳ ಮೂರು ಮಾರ್ಗದ ಬಳಿ ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಮೇ. 07ರಂದು ವರದಿಯಾಗಿದೆ.

ತೆಳ್ಳಾರ್ ದುರ್ಗಾ ಗ್ರಾಮದ ಜನಾರ್ಧನ ಆಚಾರ್ (65) ಗಾಯಗೊಂಡವರು.

ಜನಾರ್ಧನ ರವರು ಮೋಟಾರ್ ಸೈಕಲ್‌ನಲ್ಲಿ ಕಾರ್ಕಳ ಮೂರು ಮಾರ್ಗದ ಬಳಿ ಗಾಂಧಿಮೈದಾನದ ಕಡೆಗೆ ಹೋಗುತ್ತಿರುವಾಗ ಆನೆಕೆರೆ ಕಡೆಯಿಂದ ಮೂರು ಮಾರ್ಗದ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ.

ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡು ಚಿಕಿತ್ಸೆಗಾಗಿ ಕಾರ್ಕಳ ಟಿ.ಎಂ ಎ ಪೈ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಯೂತ್ ಬಿಲ್ಲವ ಸಂಘ ರಿ. ಕಾರ್ಕಳ: ಅನಿತಾ ಕಾಸರಗೋಡ್ ವಿರುದ್ಧ ಕೇಸ್ ದಾಖಲು

Madhyama Bimba

ಕ್ಷತ್ರೀಯ ಮರಾಠ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ- 107 ವಿದ್ಯಾರ್ಥಿಗಳಿಗೆ 1.42 ಲಕ್ಷ ರೂ ವಿದ್ಯಾರ್ಥಿ ವೇತನ ಹಾಗೂ ಬ್ಯಾಗ್ ವಿತರಣೆ

Madhyama Bimba

ಜೇಸಿ ಇಂಟರ್ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More