ಕಾರ್ಕಳ

ಎಸ್.ವಿ.ಟಿ. ಶಾಲೆಯಲ್ಲಿ “ಸಾಹಿತ್ಯ-ಕಲೆ-ಸಾಂಸ್ಕೃತಿಕ ಸಂಘ” ಉದ್ಘಾಟನೆ

ಕಾರ್ಕಳದ ಎಸ್.ವಿ.ಟಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಸಾಹಿತ್ಯ-ಕಲೆ-ಸಾಂಸ್ಕೃತಿಕ ಸಂಘ”ದ ಉದ್ಘಾಟನೆಯು ಜೂ. 12ರಂದು ನಡೆಯಿತು.
ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಾಲಿನಿ ಕೆ ಅಧ್ಯಕ್ಷತೆಯನ್ನು ವಹಿಸಿದ್ದರು.

ಸಾಹಿತ್ಯ ಸಂಘದ ಉದ್ಘಾಟನೆಯನ್ನು ದೇವದಾಸ್ ಕೆರೆಮನೆ ಇವರು ನೆರವೇರಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಿಗುವ ಎಲ್ಲಾ ಅವಕಾಶಗಳನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಭವಿಷ್ಯವನ್ನು ಸುಂದರಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ಕಲಾ ಮತ್ತು ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿದ ಶ್ರೀಮತಿ ಡಾ| ಹರ್ಷಾ ಕಾಮತ್ ವಿದ್ಯಾರ್ಥಿಗಳು ಬಾಲ್ಯದಿಂದಲೇ ಕಲೆ ಮತ್ತು ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಸಂಸ್ಕಾರವಂತರಾಗಿ ಬೆಳೆಯಬಹುದು ಎಂದು ಅಭಿಪ್ರಾಯಪಟ್ಟರು.

ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

ರೆಂಜಾಳ ಭೂಕುಸಿತ ಸ್ಥಳಕ್ಕೆ ಕಾರ್ಕಳ ಕಾಂಗ್ರೆಸ್ ನಿಯೋಗ ಭೇಟಿ

Madhyama Bimba

ಅಶಕ್ತ ಕುಟುಂಬಕ್ಕೆ ನೂತನ ಗ್ರಹ ನಿರ್ಮಾಣದ ಆಸರೆ: ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಮಾದರಿ ಕಾರ್ಯ

Madhyama Bimba

ರಾಜಾಪುರ ಸಾರಸ್ವತ ಸೊಸೈಟಿಯ ಮಹಾಸಭೆ: 5.04 ಕೋಟಿ ರೂ. ನಿವ್ವಳ ಲಾಭ – ಶೇ. 18 ಡಿವಿಡೆಂಡ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More