ಕಾರ್ಕಳ

ಕಾರ್ಕಳ: ಮೋಟಾರ್ ಸೈಕಲ್‌ಗೆ ಕಂಟೈನರ್ ಲಾರಿ ಡಿಕ್ಕಿ- ಗಾಯ

ಕಾರ್ಕಳ: ಈದು ಗ್ರಾಮದ ಒರಿಮಾರು ಕ್ರಾಸ್ ಬಳಿ ಮೋಟಾರ್ ಸೈಕಲ್‌ಗೆ ಲಾರಿ ಡಿಕ್ಕಿಯಾದ ಘಟನೆ ಜೂ. 15ರಂದು ನಡೆದಿದೆ.

ಈದು ಗ್ರಾಮದ ನಿವಾಸಿ ರೋಹಿತ್ ಗಾಯಗೊಂಡವರು.

ಇವರು ಉಜಿರೆಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಕೆಲಸ ಮುಗಿಸಿ ಮೋಟಾರ್ ಸೈಕಲ್‌ನಲ್ಲಿ ವಾಪಾಸು ಮನೆಗೆ ಬರುತ್ತಿದ್ದ ಸಂದರ್ಭ ಕಾರ್ಕಳ ಕಡೆಯಿಂದ ನಾರಾವಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಚಾಲಕ ವಸಂತ ನಾಯಕ್‌ರವರ ಅತೀ ವೇಗದ ಚಾಲನೆಯಿಂದ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮ ರೋಹಿತ್‌ರವರು ಗಾಯಗೊಂಡಿದ್ದು ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಅಜೆಕಾರು ಗುಡ್ಡೆಅಂಗಡಿ ಶ್ರೀ ಹರಿವಾಯು ಕೃಪಾಕ್ಕೆ ಪೇಜಾವರ ಶ್ರೀ ಭೇಟಿ

Madhyama Bimba

ಬಲ್ಲಾಡಿ ವಲಯದ ಶ್ರೀ ದೇವಿ ಸ್ವಸಹಾಯ ಸಂಘದ 25ನೇ ವಾರ್ಷಿಕೋತ್ಸವ

Madhyama Bimba

ಸ್ವಯಂ ಸೇವಾ ಗೃಹರಕ್ಷಕರ ಹುದ್ದೆ : ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More