ಲಯನ್ಸ್ ಪೂರ್ವ ರಾಜ್ಯಪಾಲ ಎಂ. ಸಿ. ಶಾಸ್ತ್ರಿ ಯವರ ಮಂಗಳೂರು ಲಯನ್ಸ್ ಕ್ಲಬ್ಬಿನ ಪ್ರಾಯೋಜಕತ್ವ ದಡಿಯಲ್ಲಿ ಆರಂಭವಾದ ಮೂಡುಬಿದಿರೆಯ ಲಯನ್ಸ್ ಕ್ಲಬ್ ಇದೀಗ 50 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯ ಸಿದ್ಧತೆಯಲ್ಲಿರುವುದಾಗಿ ಮೂಡುಬಿದಿರೆ ಲಯನ್ಸ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸ್ಥಾಪಕ ಅಧ್ಯಕ್ಷ ಕೆ ರಾಮಚಂದ್ರ ರವರ ನೇತೃತ್ವದಲ್ಲಿ ಆರಂಭವಾದ ಮೂಡುಬಿದಿರೆ ಕ್ಲಬ್ ಇದೀಗ 50 ಅಧ್ಯಕ್ಷರುಗಳ ಸಮಗ್ರ ಮುಂದಾಳತ್ವದಲ್ಲಿ ಮೂಡುಬಿದಿರೆಯ ಜನತೆಗೆ ಅದೆಷ್ಟೋ ಸೇವೆಗಳನ್ನು ನೀಡಿ ಮೆಚ್ಚುಗೆ ಪಡೆದುಕೊಂಡಿರುವುದಾಗಿ ಅವರು ತಿಳಿಸಿದರು.
ಇದೀಗ ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಲಯನ್ಸ್ ಕ್ಲಬ್ 22 ಸದಸ್ಯರುಗಳನ್ನು ಒಳಗೊಂಡು ನೂತನವಾಗಿ ಲಯನ್ಸ್ ಸೇವಾ ಟ್ರಸ್ಟ್ ಮೂಡುಬಿದಿರೆ( ರಿ ) ನ್ನು ಸ್ಥಾಪಿಸಿ ಲಯನ್ಸಿನ ಎಲ್ಲ ಸದಸ್ಯರುಗಳ ಧನಸಹಾಯದ ಮೂಲಕವಾಗಿ ಸುಮಾರು 40 ಲಕ್ಷದ ವೆಚ್ಚದಲ್ಲಿ ಲಯನ್ಸ್ ಹರಿಭವ ಸಭಾಭವನವನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸುತ್ತಿದೆ.ಈ ಸಭಾಭವನವು ಯಾವುದೇ ಆರ್ಥಿಕ ಲಾಭವನ್ನು ನಿರೀಕ್ಷಿಸದೆ ಸಮಾಜದ ಎಲ್ಲಾ ವರ್ಗದ ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಬಳಸಿಕೊಳ್ಳಲಾಗುವುದು.
‘ಹರಿಭವ’ ಸಭಾಂಗಣವನ್ನು ಶಿಮುಂಜಿ ಪರಾರಿ ಹರಿಯಪ್ಪ ಶೆಟ್ಟಿ ಮತ್ತು ಕಡಂದಲೆ ಪರಾರಿ ಭವಾನಿ ಶೆಟ್ಟಿ ಇವರ ಸ್ಮರಣಾರ್ಥ ಲಯನ್ ಡಾಕ್ಟರ್ ಕೆ ನಿತ್ಯಾನಂದ ಶೆಟ್ಟಿಯವರು ಪ್ರಾಯೋಜಿಸಿ ದರೆ ‘ಮಂಜುಶ್ರೀ ವೇದಿಕೆಯನ್ನು ‘ ಕಣಂಜಾರು ಪಟ್ಟದ ಮನೆ ಕೃಷ್ಣ ಹೆಗ್ಡೆ ಹಾಗೂ ತಾಳಿಪಾಡಿ ಗುತ್ತು ಸವಿತಾ ಕೆ ಹೆಗ್ಡೆ ಯವರ ಸ್ಮರಣಾರ್ಥ ಲಯನ್ ಶಿವಪ್ರಸಾದ್ ಹೆಗ್ಡೆ ಪ್ರಾಯೋಜಿಸಿರುತ್ತಾರೆ. ಹಾಗೂ ಎಂ ಕೆ ‘ಪದ್ಮನಾಭ ಭವಾನಿ ಡೈನಿಂಗ್ ಹಾಲ್ ‘ನ್ನು ಎಂ ಕೆ ಪದ್ಮನಾಭ ಗೌಡ ಮತ್ತು ಭವಾನಿ, ಕಡೆಪಲ್ಲ, ಗಾಂಧಿನಗರ, ಮೂಡುಬಿದಿರೆ ಇವರ ಸ್ಮರಣಾರ್ಥ ಲಯನ್ ದಿನೇಶ್ ಎಂ. ಕೆ ರವರು ಪ್ರಾಯೋಜಿಸಿದ್ದಾರೆ.
ಈ ಯೋಜನೆಗಳು ಜೂನ್25 ರಂದು ಲೋಕಾರ್ಪಣೆಗೊಳ್ಳಲಿದೆ. ಉದ್ಘಾಟಕರಾಗಿ ಲಯನ್ಸ್ ಜಿಲ್ಲೆ, 317 ಡಿ ಇದರ ಜಿಲ್ಲಾ ರಾಜ್ಯಪಾಲರಾದ ಲಯನ್ ಕುಡ್ಪಿ ಅರವಿಂದ ಶೆಣೈ, ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಮುಲ್ಕಿ ಕ್ಷೇತ್ರದ ಶಾಸಕರಾದ ಉಮಾನಾಥ ಎ. ಕೋಟ್ಯಾನ್, ಕರ್ನಾಟಕ ಸರ್ಕಾರ ದ ಮಾಜಿ ಮಂತ್ರಿಗಳಾದ ಕ ಅಭಯಚಂದ್ರ ಜೈನ್, ಲಯನ್ಸ್ ಜಿಲ್ಲೆಯ ನಿಯೋಜಿತ ರಾಜ್ಯಪಾಲರಾದ ಲಯನ್ ಎಚ್. ಎಂ. ತಾರನಾಥ್, ಪ್ರಥಮ ಜಿಲ್ಲಾ ಉಪ ರಾಜ್ಯಪಾಲರಾದ ಲಯನ್ ಗೋವರ್ಧನ್ ಕೆ ಶೆಟ್ಟಿ, ದ್ವಿತೀಯ ಜಿಲ್ಲಾ ಉಪರಾಜ್ಯಪಾಲರಾದ ಲಯನ್ ವೆಂಕಟೇಶ್ ಹೆಬ್ಬಾರ್, ಪ್ರಾಂತೀಯ ಅಧ್ಯಕ್ಷರಾದ ಲಯನ್ ಡಿ ಕೆ ಜಗದೀಶ್ ಚಂದ್ರ, ವಲಯಾಧ್ಯಕ್ಷರಾದ ಲಯನ್ ಜೋಸ್ಸಿ ಮೆನೇಜಸ್ ಭಾಗವಹಿಸಲಿದ್ದಾರೆ. ಸಮಾರಂಭ ದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ಶಿವಪ್ರಸಾದ್ ಹೆಗ್ಡೆ ಕಣಂಜಾರು ವಹಿಸಿಕೊಳ್ಳಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ನ ಕಾರ್ಯದರ್ಶಿ ಓಸ್ವಾಲ್ಡ್ ಡಿಕೊಸ್ತಾ, ವಲಯಾಧ್ಯಕ್ಷ ಜೋಸ್ಸಿ ಮಿನೇಜಸ್ ಉಪಸ್ಥಿತರಿದ್ದರು.
