Blog

ಜೆ ಸಿ ಐ ಇಂಡಿಯಾ ವಲಯ ತರಬೇತಿಧಾರರಾಗಿ ಮನು ಶೆಟ್ಟಿ ಇನ್ನಾ

ಜೇಸಿಐ ಇಂಡಿಯಾ ವಲಯ ತರಬೇತುದಾರರಾಗಿ ಮನು ಶೆಟ್ಟಿ ಇನ್ನಾ ಆಯ್ಕೆ*

 

ಇತ್ತೀಚೆಗೆ ಕಾಪುವಿನಲ್ಲಿ ನಡೆದ ಜೆಸಿಐ ಭಾರತದ ವಲಯ ತರಬೇತುದಾರರ ಮೂರು ದಿನಗಳ ಕಾರ್ಯಾಗಾರದಲ್ಲಿ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮೊದಲಾದ 7 ಜಿಲ್ಲೆಗಳನ್ನೊಳಗೊಂಡ 3 ವಲಯಗಳ ಸುಮಾರು 35 ಜೇಸಿ ಸ್ಪರ್ಧಿಗಳು ಭಾಗವಹಿಸಿದ್ದು, ಜೇಸಿಐ ಪಡುಬಿದ್ರಿಯ ಸದಸ್ಯೆ ಮನು ಶೆಟ್ಟಿ ಇನ್ನಾ ರವರು ಜೇಸಿಐ ಭಾರತದ ವಲಯ ತರಬೇತುದಾರರಾಗಿ ಆಯ್ಕೆಯಾಗಿರುತ್ತಾರೆ. ಜೇಸಿಐ ಭಾರತದ ವಲಯ 15 ರ ಪೂರ್ವ ವಲಯಾದ್ಯಕ್ಷ ಇನ್ನಾ ಉದಯ ಕುಮಾರ್ ಶೆಟ್ಟಿ ಮತ್ತು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರೇಶ್ಮಾ ಉದಯ ಶೆಟ್ಟಿ ಯವರ ಪುತ್ರಿಯಾಗಿರುವ ಮನು ಶೆಟ್ಟಿಯವರು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದು, ವಲಯ ಹದಿನೈದರ ಅತಿ ಕಿರಿಯ ವಯಸ್ಸಿನ ತರಬೇತುದಾರರೆನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Related posts

ಕಾರ್ಕಳದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು

Madhyama Bimba

ಎಂ ಡಿ ಅಧಿಕಾರಿ ಪುತ್ತಳಿಗೆ ಮಾಲಾರ್ಪಣೆ

Madhyama Bimba

ಉಡುಪಿ ಜಿಲ್ಲೆಯಲ್ಲಿ ಆಗಸ್ಟ್ 4 ಶಾಲೆಗಳಿಗೆ ರಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More