ಕಾರ್ಕಳ

ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ: ಮುಂಬಯಿಯಲ್ಲಿ ಪೂರ್ವಭಾವಿ ಸಭೆ

ಕಾರ್ಕಳ: ಇತಿಹಾಸ ಪ್ರಸಿದ್ದ ಆದಿ ಆಲಡೆ ಕ್ಷೇತ್ರವಾಗಿರುವ ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೈವಜ್ಞರ ನೇತೃತ್ವದಲ್ಲಿ ಪ್ರಾಯಶ್ಚಿತ ಪೂಜೆ ನೆರವೇರಿದೆ. ಅಲ್ಲದೇ ಈಗಾಗಲೇ ಜೀರ್ಣೋದ್ದಾರ ಸಮಿತಿಯನ್ನು ಕೂಡ ರಚಿಸಲಾಗಿದ್ದು, ಇದರ ಅಂಗವಾಗಿ ಮುಂಬಯಿಯ ಲಾಲ್ ಚೌಕ್ ನಲ್ಲಿರುವ ಹೊಟೇಲ್ ಶ್ರೀಕೃಷ್ಣ ಪ್ಯಾಲೇಸ್ ನಲ್ಲಿ ಆಗಸ್ಟ್ 9ರಂದು ಸಂಜೆ 3.30 ಗಂಟೆಗೆ ಪೂರ್ವಭಾವಿ ಸಭೆ ನಡೆಯಲಿದೆ ಎಂದು ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ನಂದಳಿಕೆ ಸುಹಾಸ್ ಹೆಗ್ಡೆ ಹೇಳಿದರು.

ಅವರು ಸುದ್ಧಿಗೋಷ್ಟಿಯಲ್ಲಿ ಮಾತನಾಡಿ, ವಾರ್ಷಿಕ ಸಿರಿಜಾತ್ರೆಯ ಮೂಲಕ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ನಂದಳಿಕೆ ಕ್ಷೇತ್ರದ ಜೀರ್ಣೋದ್ಧಾರದ ಸಂಕಲ್ಪ ಕೈಗೊಂಡಿದ್ದು, ಇದರ ಪ್ರಥಮ ಪೂರ್ವಭಾವಿ ಸಭೆಯನ್ನು ಮುಂಬಯಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ವ್ಯಾಪಾರ, ಉದ್ಯಮ ಹಾಗೂ ಉದ್ಯೋಗ ಮಾಡಿಕೊಂಡು ಮುಂಬಯಿಯಲ್ಲಿ ನೆಲೆಸಿರುವ ಸಾವಿರಾರು ಜನರನ್ನು ಸಂಪರ್ಕಿಸುವ ಸಲುವಾಗಿ ಪ್ರತ್ಯೇಕ ವಾಟ್ಸಾಪ್ ಗ್ರೂಪ್ ರಚಿಸಲಾಗಿದ್ದು, ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ವಿನಂತಿಸಿಕೊoಡರು.

ಸುಮಾರು 900 ವರ್ಷಗಳ ಇತಿಹಾಸವಿರುವ ಆದಿ ಆಲಡೆ ಕ್ಷೇತ್ರವಾಗಿರುವ ನಂದಳಿಕೆಯ ಸಿರಿಜಾತ್ರೆಗೆ ಹಲವು ಜಿಲ್ಲೆಗಳಿಂದ ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಾರೆ. ಪುರಾತನ ಇತಿಹಾಸವಿರುವ ದೇವಸ್ಥಾದ ಜೀರ್ಣೋದ್ದಾರಕ್ಕೆ ಸಂಕಲ್ಪ ಮಾಡಿರುವ ಹಿನ್ನಲೆಯಲ್ಲಿ ಈ ಕಾರ್ಯವು ಸಾಂಗವಾಗಿ ನೆರವೇರಲು ಸಮಸ್ತ ಭಕ್ತಾಧಿಗಳ ಸಹಕಾರ ಅತ್ಯಗತ್ಯ ಎಂದರು. ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ ಕೃಷ್ಣ ವೈ. ಶೆಟ್ಟಿ, ಕಂಬಳದ ಕಾರ್ಯಾಧ್ಯಕ್ಷರಾಗಿ ಶ್ರೀಕಾಂತ್ ಭಟ್ ಸೇರಿದಂತೆ ಕ್ರೀಯಾಶೀಲ ಸಮಿತಿಯನ್ನು ರಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ರವಿರಾಜ್ ಭಟ್ ನಂದಳಿಕೆ ಉಪಸ್ಥಿತರಿದ್ದರು.

Related posts

ಅಮೃತಭಾರತಿ ವಿದ್ಯಾಲಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೃಷಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ

Madhyama Bimba

ಬೈಲೂರು:  ಊರು ಬೋಡು ಪುದರ್ ಬೊಡ್ಚಿ ನಾಟಕದ ಶುಭಮುಹೂರ್ತ

Madhyama Bimba

ಗರ್ಭ ಕಂಠದ ಕ್ಯಾನ್ಸರ್ ಬಗ್ಗೆ ಕಾರ್ಯಗಾರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More