ಕಾರ್ಕಳ

ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ, ಕಾರ್ಕಳದಲ್ಲಿ ಜೂ.೨೦ರಂದು ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಆಚರಿಸಲಾಯಿತು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾರ್ಕಳ ನಗರ ಪೊಲೀಸ್ ಇಲಾಖೆಯ ಪೊಲೀಸ್ ಅಧಿಕಾರಿ ಗಣೇಶ್ ರವರು ಆಗಮಿಸಿ, “ನಾಯಕತ್ವ ಗುಣವು ಶಾಲೆಯಿಂದಲೇ ಆರಂಭವಾಗಬೇಕು” ಎಂಬುದಾಗಿ ಹೇಳಿದರು.


ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷರಾದ ಡಾ. ಪ್ರಶಾಂತ್ ಹೆಗ್ಡೆ ಇವರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ನೂತನ ನಾಯಕ ತೇಜಸ್ ವಿ . ಶೇರಿಗಾರ್, ಶಾಲಾ ನಾಯಕಿ ಸುಜನ್ಯ ಕುಲಾಲ್, ಶಿಸ್ತು ವಿಭಾಗದ ನಾಯಕ ಸಮರ್ಥ್ ಬಿ. ಆಳ್ವ, ಆಹಾರ ವಿಭಾಗದ ನಾಯಕ ಸಮರ್ಥ್ ಎಸ್. ಕೆ, ಸಾಂಸ್ಕೃತಿಕ ವಿಭಾಗದ ನಾಯಕ ತನೀಶ್ ಆರ್, ಕ್ರೀಡಾ ನಾಯಕ ಪವನ್ ಕಾಮತ್, ವಿರೋಧ ಪಕ್ಷದ ನಾಯಕರಾಗಿ ಅನ್ಶಿ ಎಸ್ . ಅಂಚನ್, ಶ್ರೀಶಾನ್ಯ ಪೂಜಾರಿ ,ದಳ ನಾಯಕರಾದ ಪ್ರಣವ್ಯ ಪಿ. ಶೆಟ್ಟಿ , ದೀಪ್ತಿ ಆರ್, ಶ್ರೀಶ್ ಎಸ್. ಆಚಾರ್, ಪ್ರಗ್ಯ ಪುತ್ರನ್ ಪ್ರಮಾಣ ವಚನವನ್ನು ಸ್ವೀಕರಿಸಿದರು.

ಜವಾಬ್ದಾರಿಯುತ ಹುದ್ದೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲಾ ಅಧ್ಯಕ್ಷರಾದ ಡಾ.ಪ್ರಶಾಂತ್ ಹೆಗ್ಡೆ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ಕೀರ್ತನ್ ಶೆಣೈ ಅಧಿಕಾರದ ಬ್ಯಾಡ್ಜ್‌ಗಳನ್ನು ಪ್ರದಾನ ಮಾಡಿದರು.

ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್ . ಕಾಮತ್ ಇವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ, ನಾಯಕತ್ವದ ಗುಣಗಳು, ಜವಾಬ್ದಾರಿ ಮತ್ತು ಸೇವಾ ಮನೋಭಾವದ ಮಹತ್ವವನ್ನು ತಿಳಿಸಿದರು. ಆಯ್ಕೆಯಾದ ವಿದ್ಯಾರ್ಥಿಗಳು ಶಾಲೆಯ ಶಿಸ್ತು, ಮೌಲ್ಯಗಳು ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹತ್ತನೇ ತರಗತಿ ವಿದ್ಯಾರ್ಥಿ ನಯನ ವಿ, ಆಚಾರ್ಯ ನಿರೂಪಿಸಿ, ಅನುರಾಗ್ ಕಾಮತ್ ಸ್ವಾಗತಿಸಿ, ಶ್ರೀಶ್ ಎಸ್.ಆಚಾರ್ ವಂದಿಸಿದರು.

Related posts

ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿಗೆ ಮೋಸ್ಟ್ ಪ್ರಾಮಿಸಿಂಗ್ ಆಂಡ್ ಟ್ರಸ್ಟೆಡ್ ಪದವಿಪೂರ್ವ ಕಾಲೇಜು- 2024 ಪ್ರಶಸ್ತಿಯ ಗರಿ

Madhyama Bimba

ಅಮೃತ ಭಾರತಿ ವಿದ್ಯಾಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

Madhyama Bimba

ಕೈಸ್ಟ್‌ಕಿಂಗ್: ಕುಸ್ತಿ ಪಂದ್ಯಾಟದಲ್ಲ್ಲಿ ಹತ್ತನೇ ತರಗತಿಯ ರಿತು ಫ್ರಾನ್ಸಿಸ್ ಮತ್ತು ಸಾನ್ವಿ ನಾಯಕ್ ರಾಜ್ಯಮಟ್ಟಕ್ಕೆ ಆಯ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More