ಕಾರ್ಕಳಹೆಬ್ರಿ

ಹೆಬ್ರಿ ಎಸ್.ಆರ್. ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ “ಟ್ಯಾಲೆಂಟ್ ಫೆಸ್ಟ್”

ವಿದ್ಯಾರ್ಥಿಗಳು ಪಠ್ಯಪುಸ್ತಕದ ಪಾಠಗಳನ್ನು ಅರ್ಥಮಾಡಿಕೊಂಡು ಓದುವುದರ ಜೊತೆಗೆ, ನಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯ. ಸಿಕ್ಕಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಬೇಕು ಎಂದು ಎಸ್. ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್. ನಾಗರಾಜ್ ಶೆಟ್ಟಿ ಅವರು ಹೇಳಿದರು.

ಅವರು ಎಸ್ ಆರ್ ಆಂಗ್ಲ ಮಾಧ್ಯಮ ಶಾಲೆಯ (ರಾಜ್ಯ ಪಠ್ಯಕ್ರಮ) ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಟ್ಯಾಲೆಂಟ್ ಫೆಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ನಿಮ್ಮದೇ ಆದ ವಿಶಿಷ್ಟ ಪ್ರತಿಭೆಗಳು ಅಡಗಿದೆ. ಸೂಕ್ತ ವೇದಿಕೆಗಳು ದೊರೆತಾಗ ಮಾತ್ರ ಅದು ತಿಳಿಯುತ್ತದೆ. ಪ್ರತಿಯೊಬ್ಬರು ಭಾಗವಹಿಸಿ ಎಲ್ಲರೂ ಅವಕಾಶವನ್ನು ಬಳಸಿಕೊಳ್ಳಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎಸ್.ಆರ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಭಗವತಿ, ಉಪಪ್ರಾಂಶುಪಾಲರಾದ ದೀಪಕ್ ಎನ್, ಎಸ್.ಆರ್. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ್ ಆಚಾರ್ಯ, ಕೋಓರ್ಡಿನೇಟರ್ ಸುಚಿತ್ರ, ವಿನಯಾ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನವು ನಡೆಯಿತು.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ವೈಭವ್ ನಿರೂಪಿಸಿ, ಮನೀಶ್ ಬಾಬು ಸ್ವಾಗತಿಸಿ, ಶಮಿತಾ ವಂದಿಸಿದರು.

Related posts

ಚಿಕ್ಕಲ್‌ಬೆಟ್ಟು ಶಾಲೆಯಲ್ಲಿ ಕಂಪ್ಯೂಟರ್ ಮತ್ತು ಪ್ರಿಂಟರ್ ಕೊಡುಗೆ ಉದ್ಘಾಟನೆ

Madhyama Bimba

ವರಂಗದ ಪ್ರಭಾಕರ ನಾಪತ್ತೆ

Madhyama Bimba

ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾಗಿ ಮಾಲಿನಿ ಜೆ. ಶೆಟ್ಟಿ – ಕಾರ್ಯದರ್ಶಿಯಾಗಿ ಜ್ಯೋತಿ ರಮೇಶ್‌

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More