ಮೂಡುಬಿದಿರೆ

ಮೂಡುಮಾರ್ನಾಡು ಪ್ರೌಢಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ಹಾಗೂ ಗುರುತುಕಾರ್ಡು ವಿತರಣಾ ಸಮಾರಂಭ

ಮೂಡುಮಾರ್ನಾಡು ಪಿ.ಎಂ.ಶ್ರೀ. ಸರಕಾರಿ ಪ್ರೌಢಶಾಲೆಯಲ್ಲಿ ಉಡುಪಿ ಜಿಲ್ಲೆಯ ಜಿ.ಎಸ್.ಬಿ.ಸಮಾಜ ಹಿತರಕ್ಷಣಾ ವೇದಿಕೆ(ರಿ) ಪ್ರಾಯೋಜಕತ್ವದಲ್ಲಿ ಶಾಲಾ ಮಕ್ಕಳಿಗೆ ಉಚಿತ ಮಕ್ಕಳ ಗುರುತುಕಾರ್ಡು ಹಾಗೂ ನೋಟ್ ಪುಸ್ತಕ ವಿತರಣೆ ಮಾಡುವ ಸಮಾರಂಭ ನಡೆಯಿತು.


ವಿದ್ಯಾಪೋಷಕ್ ಸಮಿತಿಯ ಸಂಚಾಲಕರಾಗಿರುವ ವಿಜಯ ವಿಶ್ವನಾಥ್ ಶೆಣೈ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯ ಸಾಧನೆಗಳನ್ನು ಪ್ರಶಂಸಿಸಿ, ಶಾಲೆಯ ಅಭಿವೃದ್ಧಿಗೆ ವೇದಿಕೆಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಪರವಾಗಿ ಅವರನ್ನು ಸನ್ಮಾನಿಸಲಾಯಿತು.

ಗಣಿತ ಶಿಕ್ಷಕಿ ಸುಮಿತಾ ಸ್ವಾಗತಿಸಿದರು. ಆಂಗ್ಲ ಭಾಷಾ ಶಿಕ್ಷಕಿ ಛಾಯಾ ಕಿಣಿ ಧನ್ಯವಾದ ಸಮರ್ಪಿಸಿದರು. ಸಮಾಜವಿಜ್ಞಾನ ಶಿಕ್ಷಕ ಜೋನ್ ರೊನಾಲ್ಡ್ ಕಾರ್ಯಕ್ರಮ ನಿರ್ವಹಿಸಿದರು.

Related posts

ಮುಲ್ಕಿ- ಮೂಡಬಿದ್ರೆ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ವಸಂತ ಬರ್ನಾಡ್ .

Madhyama Bimba

ಶ್ರೀ ಮಹಾವೀರ ಕಾಲೇಜಿನಲ್ಲಿ ಗಾಂಧೀ ಜಯಂತಿ ಆಚರಣೆ

Madhyama Bimba

ಮಹಾವೀರ ಕಾಲೇಜಿನಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಮಾಹಿತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More