ಕಾರ್ಕಳ

ಮಕ್ಕಿ ಶಾಲೆಯಲ್ಲಿ ಉಚಿತ ಲೇಖನ ಸಾಮಗ್ರಿ, ಕೊಡೆ ವಿತರಣೆ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಕ್ಕಿ ಇಲ್ಲಿ 2026-27 ನೇ ಸಾಲಿನ ಉಚಿತ ಲೇಖನ ಸಾಮಗ್ರಿ, ಕೊಡೆ ಮತ್ತು ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮ ಜೂ. 25ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಿರ್ತಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಸರಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ರೀತಿಯಲ್ಲಿ ವ್ಯಾಸಂಗ ನಡೆಸಬೇಕು ಎಂದು ಕರೆ ನೀಡಿದರು.

ದಾನಿ ಶೇಖರ್ ಮಕ್ಕಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಶೈನಾಝ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರವೀಣ್ ಕುಮಾರ್ ಇವರು ಕೊಡ ಮಾಡಿದ ಲೇಖನ ಸಾಮಗ್ರಿ, ಶೇಖರ್ ಮಕ್ಕಿ ಇವರು ನೀಡಿದ ಕೊಡೆಗಳನ್ನು ವಿತರಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲೀನಾ ಡಿಸೋಜಾ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಬೇಬಿ ವಂದನಾರ್ಪಣೆಗೈದರು.

Related posts

ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಇದರ ಅಧ್ಯಕ್ಷರಾಗಿ ಸುನೀತ ಹೆಬ್ಬಾರ್ ಆಯ್ಕೆ

Madhyama Bimba

ಕಾರ್ಕಳ: ಕಾರುಗಳ ನಡುವೆ ಅಪಘಾತ

Madhyama Bimba

ಮುನಿಯಾಲು ಶ್ರೀಮನ್ನಾಗಮಂಡಲ ಪ್ರಚಾರ ಕಾರ್ಯಕ್ಕೆ ಚಾಲನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More