ಮೂಡುಬಿದಿರೆ

ಜುಲೈ1:ಮೂಡುಬಿದಿರೆಯಲ್ಲಿ ಪತ್ರಿಕಾ ದಿನಾಚರಣೆ

ಮೂಡುಬಿದಿರೆ ಪ್ರೆಸ್‌ಕ್ಲಬ್ (ರಿ.) ಮತ್ತು  ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ
ಜಂಟಿ ಸಹಭಾಗಿತ್ವದಲ್ಲಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಜುಲೈ 1ರಂದು ಮಧ್ಯಾಹ್ನ 3ಗಂಟೆಗೆ ಪತ್ರಿಕಾ ದಿನಾಚರಣೆ ನಡೆಯಲಿದೆ.

ಸಭೆಯ ಅಧ್ಯಕ್ಷತೆಯನ್ನು ಮೂಡುಬಿದಿರೆ ಪ್ರೆಸ್‌ ಕ್ಲಬ್‌ (ರಿ.) ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ ವಹಿಸಿಕೊಳ್ಳಲಿದ್ದು, ಶಾಸಕ ಉಮಾನಾಥ ಎ. ಕೋಟ್ಯಾನ್ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರು ಮತ್ತು ಸಮಾಜ ಮಂದಿರ ಸಭಾ (ರಿ.)ಅಧ್ಯಕ್ಷರು
ಕೆ. ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಪುಷ್ಪರಾಜ್ ಬಿ.ಎನ್. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ
ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ
ಅಧ್ಯಕ್ಷರು ನವೀನ್ ಸಾಲ್ಯಾನ್ ಭಾಗವಹಿಸಲಿದ್ದಾರೆ.

ಟಿವಿ9 ಮಡಿಕೇರಿ ವಿಡಿಯೋ ಜರ್ನಲಿಸ್ಟ್ ನವೀನ್ ಸುವರ್ಣರಿಗೆ ಪ್ರೆಸ್ ಕ್ಲಬ್ ಗೌರವ,
ಸನ್ಮತ್ ಎಸ್. ಆಚಾರ್ಯ (ಪಿಯುಸಿ ಸಾಧಕರು) * ಅಮೋಫ್ ಹೆಗ್ಡೆ (ಎಸ್‌ಎಸ್ಎಲ್‌ಸಿ
ಸಾಧಕರು) ಪ್ರತಿಭಾ ಪುರಸ್ಕಾರ ದೊರೆಯಲಿದೆ.

ವಿಶ್ರಾಂತ ಪತ್ರಕರ್ತ ಸದಾನಂದ ಹೆಗಡೆಕಟ್ಟೆ ಪ್ರಾಯೋಜಿತ ದತ್ತಿನಿಧಿ ಉಪನ್ಯಾಸವನ್ನು ಖ್ಯಾತ ಎಐ ಮತ್ತು ಸೈಬರ್ ಭದ್ರತಾ ತಜ್ಞರು ಹಾಗೂ ಲೇಖಕರು ಡಾ। ಅನಂತ್ ಪ್ರಭು ಜಿ. ಯವರು ‘ಎಐ ಮೂಲಕ ಪತ್ರಕರ್ತರಿಗಿರುವ ಅವಕಾಶಗಳು ಮತ್ತು ಸವಾಲುಗಳು’ ವಿಷಯದಲ್ಲಿ ಮಾತನಾಡಲಿದ್ದಾರೆ. ಸರ್ವರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.

Related posts

ಗಾಂಧಿ ಜಯಂತಿ : ಅರಣ್ಯ ಇಲಾಖಾಧಿಕಾರಿಗಳಿಂದ ಸ್ವಚ್ಛತಾ ಕಾರ್ಯ

Madhyama Bimba

ಎಸ್‌ಕೆಪಿಎ ಮೂಡುಬಿದಿರೆ ವಲಯದ 16ನೇ ವಾರ್ಷಿಕ ಸಭೆ

Madhyama Bimba

ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ- 217.90 ಕೋಟಿ ವ್ಯವಹಾರ, ಶೇಕಡ 11 ಲಾಭಾಂಶ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More