ಮೂಡುಬಿದಿರೆ

ಪಣಪಿಲ ಶ್ರೀ ರಾಜ್ ಮತ್ಸ್ಯ ಫಾರ್ಮ್ ನಲ್ಲಿ ಮೀನು ಹಿಡಿಯುವುದು ಮತ್ತು ಮಾರಾಟ

ದರೆಗುಡ್ಡೆ ಸಮೀಪದ ಪಣಪಿಲ ಶ್ರೀ ರಾಜ್ ಮತ್ಸ್ಯ ಫಾರ್ಮ್ ಸಹಯೋಗದಲ್ಲಿ ಮೀನು ಕೃಷಿಕರ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಮೀನುಗಾರಿಕಾ ಸಂಶೋಧನಾ ಮತ್ತು ಮಾಹಿತಿ ಕೇಂದ್ರ ಹೆಬ್ಬಾಳ ಬೆಂಗಳೂರು ಇವರ ಆಶ್ರಯದಲ್ಲಿ ಐದನೇ ವರ್ಷದ ಮತ್ಸ್ಯ ಮೇಳ ಮೀನು ಹಿಡಿಯುವುದು ಮತ್ತು ಮಾರಾಟ, ಮೀನು ಕೃಷಿ ತರಬೇತಿ ಕಾರ್ಯಕ್ರಮ
ಪ್ರಣಪಿಲ ಕೊಟ್ಟಾರಿ ಬೆಟ್ಟು ಶ್ರೀ ರಾಜ್ ಮತ್ಸ್ಯ ಫಾರ್ಮ್ ನಲ್ಲಿ ಇಂದು(ಶನಿವಾರ) ಉದ್ಘಾಟನೆಗೊಂಡಿತು.

ಶುದ್ಧ ನೀರಿನಲ್ಲಿ ನೈಸರ್ಗಿಕ ಆಹಾರವನ್ನು ನೀಡಿ ಪೌಷ್ಟಿಕವಾಗಿ ಬೆಳೆದಿರುವ ಉತ್ತಮ ಗುಣಮಟ್ಟದ ತಾಜಾ ಆಹಾರದ ವಿಶೇಷ ರುಚಿಯುಳ್ಳ ಜೀವಂತ ಮೀನುಗಳ ಮಾರಾಟದ ಮೇಳವನ್ನು ಕೊಟ್ಟಾರಿ ಬೆಟ್ಟು ಕೃಷ್ಣಮ್ಮ ಜೆ. ಕೋಟ್ಯಾನ್ ಹನ್ನೇರ್ ಉದ್ಘಾಟಿಸಿ ಶುಭ ಹಾರೈಸಿದರು.

ಹೆಬ್ಬಾಳ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾಕ್ಟರ್ ಚೇತನ್ ಮಾಹಿತಿದಾರರಾಗಿ ಭಾಗವಹಿಸಿ ಮೀನು ಸಾಕಾಣಿಕೆ ವೈಜ್ಞಾನಿಕವಾಗಿ ನಡೆಸಿದಾಗ ಬರುವ ಆದಾಯಗಳು ಉತ್ತಮವಾಗಿರುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಸಿಹಿ ನೀರಿನಲ್ಲಿ ಮೀನು ಉತ್ಪಾದನೆಯಾದಾಗ ಹೆಚ್ಚಿನ ಬೇಡಿಕೆಗಳಿಗೆ ಸ್ಪಂದಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ದರೆಗುಡ್ಡೆ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಬೇಲೊಟ್ಟು ಅಶೋಕ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಶ್ರೀ ರಾಜ್ ಫಾರ್ಮ್ ನಲ್ಲಿ ಮೀನುಗಾರಿಕೆಯನ್ನು ಲಾಭದಾಯಕವಾಗಿ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಂಚಾಯತ್ದ ಮಾಜಿ ಉಪಾಧ್ಯಕ್ಷ ಮುನಿರಾಜ ಹೆಗ್ಡೆ, ಮಾಜಿ ಸದಸ್ಯ ದೀಕ್ಷಿತ್ ಕೆ ಪಣಪಿಲ, ಕೊಟ್ಟಾರಿಬೆಟ್ಟು ಹರಿಯಪ್ಪ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕೊಟ್ಟಾರಿ ಬೆಟ್ಟು ದೇವರಾಜ್ ಕೋಟ್ಯಾನ್ ಸಭಾಧ್ಯಕ್ಷತೆ ವಹಿಸಿದ್ದರು. ಸರಿತಾ ಪ್ರಾರ್ಥನೆಗೈದು ಧನ್ಯವಾದವಿತ್ತರು.ಶ್ರೀ ರಾಜ್ ಫಾರ್ಮ್ ಮುಖ್ಯಸ್ಥ ರಾಜೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ಸುಮಾರು 500 ರಷ್ಟು ದೊಡ್ಡ ಗಾತ್ರದ ಮೀನುಗಳು 25,000 ದಷ್ಟು ಮೀನು ಮರಿಗಳು ಇಂದು ಮಾರಾಟ ಗೊಳ್ಳಲಿರುವುದಾಗಿ ತಿಳಿಸಿದರು.

ಕಾಟ್ಲಾ, ರೋಹು, ಗ್ರಾಸ್, ಕಾರ್ಪ್, ಗೌರಿ, ಫಂಗೇಸಿಯಸ್, ತಿಲಪಿಯಾ, ರೂಪ್ ಚಂದ್, ಮಡೆಂಜಿ ಮೀನುಗಳು ಮಾರಾಟಕ್ಕೆ ಲಭ್ಯವಿರುವುದಾಗಿ ಅವರು ತಿಳಿಸಿದರು.

Related posts

ಬಿರುಗಾಳಿಗೆ ಹಾನಿಗೀಡಾದ ಪತ್ರಕರ್ತ ಜಗದೀಶ್ ಮನೆಯಲ್ಲಿ ಪಾಲಡ್ಕ ಬಿಲ್ಲವ ಸಂಘದಿಂದ ಶ್ರಮದಾನ

Madhyama Bimba

ನಮ್ಮ ಕಂಬಳ 2025- 26ರ ಪ್ರಶಸ್ತಿ ಪ್ರದಾನ – ಇರುವೈಲ್ ಪಾಣಿಲ ‘ತಾಟೆ ‘ , ಬೋಳದಗುತ್ತು ‘ದೋಣಿ ‘ ಗೆ ಶ್ರೇಷ್ಠ ಕೋಣ ಪ್ರಶಸ್ತಿ

Madhyama Bimba

ಪಣಪಿಲದಲ್ಲಿ ಆಧಾರ್, ರಕ್ಷಣೆ ಯೋಜನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More