ಮೂಡುಬಿದಿರೆ

ಮೂಡುಬಿದಿರೆ ಅರಣ್ಯ ಇಲಾಖೆ ಮತ್ತು ಉಪವಿಭಾಗದಲ್ಲಿ ಕತ೯ವ್ಯ ನಿವ೯ಹಿಸಿ ವಯೋ ನಿವೃತ್ತಿ, ಪದೋನ್ನತಿ ಹಾಗೂ ವರ್ಗಾವಣೆಗೊಂಡಿರುವ ಅಧಿಕಾರಿಗಳಿಗೆ ಬೀಳ್ಕೊಡುಗೆ

ಮೂಡುಬಿದಿರೆ : ಇಲ್ಲಿನ ಅರಣ್ಯ ಇಲಾಖೆ ಮತ್ತು ಉಪವಿಭಾಗದಲ್ಲಿ ಕತ೯ವ್ಯ ನಿವ೯ಹಿಸಿ ವಯೋ ನಿವೃತ್ತಿ, ಪದೋನ್ನತಿ ಹಾಗೂ ವರ್ಗಾವಣೆಗೊಂಡಿರುವ ಅಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭವು ಪ್ರಕೃತಿ ಶಿಕ್ಷಣ ತರಬೇತಿ ಕೇಂದ್ರದಲ್ಲಿ ನಡೆಯಿತು.


ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಅವರ ನೇತೃತ್ವದಲ್ಲಿ ನಡೆದ ಕಾಯ೯ಕ್ರಮದಲ್ಲಿ ವಯೋನಿವೃತ್ತಿ ಹೊಂದಿರುವ ಗಸ್ತು ಅರಣ್ಯಪಾಲಕ ಶಂಕರ ಗೌಡ, ಕಂಪ್ಯೂಟರ್ ನಿರ್ವಾಹಕಿ ಉಷಾ ಶೆಟ್ಟಿ ಹಾಗೂ ಚಂದ್ರಯ್ಯ ಆಚಾರಿ.

 ಮಂಗಳೂರು ವಲಯ ಅರಣ್ಯಾಧಿಕಾರಿಯಾಗಿ ಪದೋನ್ನತಿ ಹೊಂದಿರುವ ಮಂಜುನಾಥ ಗಾಣಿಗ, ಕುದುರೆಮುಖ ವನ್ಯಜೀವಿ ವಿಭಾಗಕ್ಕೆ ವರ್ಗಾವಣೆಗೊಂಡಿರುವ ಪ್ರಭಾಕರ ಕುಲಾಲ್, ಪ್ರಥಮ ದರ್ಜೆ ಸಹಾಯಕರಾಗಿದ್ದ ಜಯರಾಮ್ ಪಿ.ಎನ್.ಅವರು ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಹಾಗೂ ಕಾರ್ಕಳ ವನ್ಯಜೀವಿ ವಲಯದ ಗಸ್ತು ಅರಣ್ಯಪಾಲಕಿ ಸ್ವರ್ಣ ನಾಯಕ್ ಅವರು ಕುದುರೆಮುಖ ವನ್ಯಜೀವಿ ವಿಭಾಗಕ್ಕೆ ವರ್ಗಾವಣೆಗೊಂಡಿದ್ದು ಇವರನ್ನೆಲ್ಲರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಆಚಾರಿ, ಕಾಕ೯ಳ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ಡಿ. ದಿನೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಮೂಡುಬಿದಿರೆ ವಲಯಾರಣ್ಯಾಧಿಕಾರಿ ಕಿರಣ್ ಕುಮಾರ್ ಸ್ವಾಗತಿಸಿದರು. ರಾಘವೇಂದ್ರ ಶೆಟ್ಟಿ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.

Related posts

ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Madhyama Bimba

ಸಂಪಿಗೆ ಹಾಲು ಉತ್ಪಾದಕರ ಸಂಘದ ನಿವೃತ ಕಾಯ೯ದಶಿ೯ ಪಿ. ರಾಮಚಂದ್ರರಿಗೆ ಬೀಳ್ಕೊಡುಗೆ

Madhyama Bimba

 ಹಂಶಶ್ರೀಗೆ ಡಾಕ್ಟರೇಟ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More