ಕಾರ್ಕಳಹೆಬ್ರಿ

ಹೆಬ್ರಿ ಅಮೃತಭಾರತಿಯಲ್ಲಿ ಹಸಿರು ಕಾರ್ಯಕ್ರಮ

ಹೆಬ್ರಿ : ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್, ಉಡುಪಿ ಜಿಲ್ಲೆ 275 ಎಸ್ ಹಾಗೂ ಪಿ ಆರ್ ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ” ಹಸಿರು” ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಗಿಡ ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಯಿತು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲಯನ್ಸ್ ಜಿಲ್ಲಾ ಗವರ್ನರ್ ಸುನಿಲ್ ಕುಮಾರ್ ಶೆಟ್ಟಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಪ್ರಕೃತಿಯ ಉಪಕಾರ ಸದಾಕಾಲ ಪಡೆದಂತಹ ನಾವು ಗಿಡ ನೆಟ್ಟು ಕೃತಜ್ಞತೆಯನ್ನು ಸಲ್ಲಿಸೋಣ. ಅಮೃತ ಭಾರತಿ ಶಿಕ್ಷಣ ಸಂಸ್ಥೆ ಹಚ್ಚ ಹಸಿರಿನ ನಡುವೆ ಇದ್ದು ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಮನೆ ಮನೆಗಳಲ್ಲಿಯೂ ಪೋಷಕರ ಸಹಕಾರದೊಂದಿಗೆ ಮಕ್ಕಳು ಗಿಡಗಳನ್ನು ನೆಟ್ಟು ಹೆಬ್ರಿಯ ಗ್ರಾಮೀಣ ಪರಿಸರ ಇನ್ನಷ್ಟು ಹಸಿರಾಗಲಿ ಎಂದು ಹೇಳಿದರು.


ಅಮೃತ ಭಾರತಿ ಟ್ರಸ್ಟಿಯವರಾದ ಎಚ್. ಯೋಗೀಶ್ ಭಟ್ ಮಾತನಾಡಿ ನಾವು ಸುಂದರ ಪರಿಸರದಲ್ಲಿ ಶಿಕ್ಷಣ ಪಡೆಯುತ್ತಿದ್ದೇವೆ. ಆಲಯನ್ಸ್ ಕ್ಲಬ್ ಮೂಲಕ ಪ್ರತಿ ಮನೆಗೂ ಗಿಡವನ್ನು ನೀಡಿ ಪರಿಸರ ಹಸಿರಾಗಿಸಲು ಮಾಡುವ ಪ್ರಯತ್ನ ಶ್ಲಾಘನೀಯವಾದುದು ಎಂದು ಹೇಳಿದರು.


ಅತಿಥಿಗಳಾದ ಅಲಯನ್ಸ್ ನ ಇಂಟರ್ನ್ಯಾಷನಲ್ ಡೈರೆಕ್ಟರ್ ಶ್ರೀಧರ ಶೇಣವ, ಇಂಟರ್ನ್ಯಾಷನಲ್ ಕಮಿಟಿ ಚೇರ್ ಪರ್ಸನ್ ಡಾ.ತಲ್ಲೂರು ಶಿವರಾಮ ಶೆಟ್ಟಿ, ಜಿಲ್ಲಾ ಪ್ರಥಮ ಉಪ ಗವರ್ನರ್ ಕೆ. ಸುಧಾಕರ ಹೆಗ್ಡೆ, ಚೀಫ್ ಕೋಆರ್ಡಿನೇಟರ್ ಭಾಸ್ಕರ್ ಶೆಟ್ಟಿ, ವಲಯಾಧ್ಯಕ್ಷ ಸುದರ್ಶನ ಶೆಟ್ಟಿ, ಅಮೃತ ಭಾರತಿ ಪಿ ಯು ಕಾಲೇಜಿನ ಅಧ್ಯಕ್ಷರಾದ ಎಚ್. ರಾಜೇಶ್ ನಾಯಕ್, ಕಾರ್ಯದರ್ಶಿಗಳಾದ ಗುರುದಾಸ್ ಶೆಣೈ, ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷರಾದ ಎಚ್. ಶೈಲೇಶ್ ಕಿಣಿ, ಟ್ರಸ್ಟಿಗಳಾದ ಭಾರ್ಗವಿ ಐತಾಳ್, ಹೆಬ್ರಿ ಅಲಯನ್ಸ್ ಕ್ಲಬ್ ಅಧ್ಯಕ್ಷರಾದ ಬಾಲಚಂದ್ರ ಎಂ, ಅಮೃತ ಭಾರತಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಪ್ರಕಾಶ್ ಜೋಗಿ, ಅರುಣ್ ಹೆಚ್ ವೈ, ಅಪರ್ಣಾ ಆಚಾರ್ಯ, ಶಕುಂತಲಾ ಮತ್ತು ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಮೃತಾ ಭಾರತಿ ಪಿ ಆರ್ ಒ ವಿಜಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಆಲಯನ್ಸ್ ಕ್ಲಬ್ ಜಿಲ್ಲಾ ಪಿ ಆರ್ ಒ ಡಾ. ಜಗದೀಶ್ ಹೊಳ್ಳ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ. ರಾಮಚಂದ್ರ ಭಟ್ ವಂದಿಸಿದರು.

 

Related posts

ಕಾರ್ಕಳದ ನೂತನ ತಹಶೀಲ್ದಾರ್ ಆಗಿ ಮಂಜುಳಾ ಕೆ ನಾಯ್ಕ್

Madhyama Bimba

ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿ ಆಯ್ಕೆ ಅನಧಿಕೃತ: ದಲಿತ ಸಂಘಟನೆ ಮುಖಂಡರ ಆಕ್ಷೇಪ

Madhyama Bimba

ಕ್ರೈಸ್ಟ್‌ಕಿಂಗ್: ಕಲಿಕಾ ಒತ್ತಡ ನಿವಾರಣೆ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More