ಕಾರ್ಕಳ

ಕಾರ್ಕಳ: ಉಪನ್ಯಾಸ ಕಾರ್ಯಕ್ರಮ

ಹವಾಮಾನ ಬಿಕ್ಕಟ್ಟು ಇಂದು ವಿಶ್ವದ ಬಹುದೊಡ್ಡ ಸಮಸ್ಯೆ. ಆರ್ಥಿಕ ಅಸಮಾನತೆ, ಐಷಾರಾಮಿ ಜೀವನ, ಆರ್ಥಿಕ ಅಸಮಾನತೆ, ಆಧುನಿಕ ತಂತ್ರಜ್ಞಾನ ಇದಕ್ಕೆ ಮೂಲ ಕಾರಣ. ನಾವು ಭೂಮಿಯಲ್ಲಿರುವ ಖನಿಜ, ಅನಿಲ, ತೈಲ ಮಿತ ಪ್ರಮಾಣದಲ್ಲಿ ಇರುವ ಕಾರಣ ಸೌರಶಕ್ತಿ ಬಳಕೆ ಮಾಡಬೇಕಾಗಿದ್ದು ಪ್ರಕೃತಿಯನ್ನು ಮುಂದಿನ ಪೀಳಿಗೆಗೂ ಉಳಿಸುವ ಪ್ರಯತ್ನ ನಮ್ಮಿಂದ ಆಗಬೇಕಾಗಿದೆ ಎಂದು ಸುಸ್ಥಿರತೆ ಮತ್ತು ಸಮತೆ ಕಾರ್ಯಕರ್ತ ಡಾ. ಶ್ರೀಕುಮಾರ್ ಕರೆ ನೀಡಿದರು.

ಅವರು ಕಾರ್ಕಳ ಹಿರಿಯ ನಾಗರಿಕರ ಸಂಘ, ಮತ್ತು ಸಹಬಾಳ್ವೆ ಕಾರ್ಕಳ ಸಂಘಗಳ ಜಂಟಿ ಆಶ್ರಯದಲ್ಲಿ ನಡೆದ ಹವಾಮಾನ ಬಿಕ್ಕಟ್ಟು ತಾಂತ್ರಿಕ ಪರಿಹಾರ ಸಾಧ್ಯವೇ? ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಕಳ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎಂ. ಕಮಲಾಕ್ಷ ಕಾಮತ್ ಸ್ವಾಗತಿಸಿ, ಕಾರ್ಯದರ್ಶಿ ಜಗದೀಶ ಗೋಖಲೆ ಉಪನ್ಯಾಸಕರ ಪರಿಚಯ ನೀಡಿದರು. ಹಿರಿಯ ಕವಯಿತ್ರಿ ಶ್ರೀಮತಿ ಜ್ಯೋತಿ ಗುರುಪ್ರಸಾದ್ ಪ್ರಾರ್ಥನೆ ಗೈದರು. ಶ್ರೀಮತಿ ಶೈಲಜಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಜೋಕಿಂ ಮೈಕೇಲ್ ಪಿಂಟೊ ಧನ್ಯವಾದ ಸಲ್ಲಿಸಿದರು.

Related posts

ಶಿವಪುರ ಶಂಕರದೇವ ದೇವಸ್ಥಾನ : ಸಮಾಲೋಚನಾ ಸಭೆ

Madhyama Bimba

ಕರ್ನಾಟಕ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ

Madhyama Bimba

ಕಾರ್ಕಳ: ಪತಿಯಿಂದ ಪತ್ನಿಗೆ ಹಲ್ಲೆ- ಮನನೊಂದು ಪತಿ ಆತ್ಮಹತ್ಯೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More