ಮೂಡುಬಿದಿರೆ

ಮಾರೂರುನಲ್ಲಿ ಶ್ರೀ ಶಕ್ತಿ ಸಿಂಚನ ಸ್ವ ಸಹಾಯ ಸಂಘ ಉದ್ಘಾಟನೆ

ಮೂಡಬಿದಿರೆ ಮಾರೂರು ಎಂಬಲ್ಲಿ ಶ್ರೀ ಶಕ್ತಿ ಸಿಂಚನ ಸ್ವ ಸಹಾಯ ಸಂಘವನ್ನು ಸ್ಥಳೀಯರಾದ ಸುರೇಶ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಮೇಲ್ವಿಚಾರಕರಾದ ಉಮೇಶ್ ರವರು ಸಂಘ ನಿರ್ವಣೆಯ ಬಗ್ಗೆ ಮಾಹಿತಿ ನೀಡಿದರು. ಶಾಖಾ ವ್ಯವಸ್ಥಾಪಕರಾದ ಕುಮುದಾಕ್ಷ ಕೋಟ್ಯಾನ್ ರವರು ಸಂಘದ ದಾಖಲಾತಿ ನೀಡಿ, ಸಂಸ್ಥೆಯ ಸೇವಾ ಚಟುವಟಿಕೆ ಮತ್ತು ಸಂಘದ ದಾಖಲಾತಿ ನಿರ್ವಹಣೆ ಬಗ್ಗೆ ತಿಳಿಸಿ ಶುಭ ಹಾರೈಸಿದರು.

ವಾರದ ಪ್ರತಿ ಆದಿತ್ಯವಾರ ಸಂಜೆ ಗಂಟೆ 5.30 ಕ್ಕೆ ಮಾರೂರು ಗ್ರೀನ್ ವಿಲ್ಲೇಜ್ ಎಂಬಲ್ಲಿ ಸಭೆ ನಡೆಸಿ ಪ್ರತಿಯೊಬ್ಬರು ರೂ 50/- ರಂತೆ ಉಳಿತಾಯ ಮಾಡುವುದೆಂದು ನಿರ್ಣಯಿಸಲಾಯಿತು. ಸಂಘದ ಅಧ್ಯಕ್ಷರಾಗಿ ಶ್ರೀಮತಿ ವನಿತಾ ಹಾಗೂ ಕಾರ್ಯದರ್ಶಿಯಾಗಿ ಕು. ಪ್ರತಿಮಾ ಆಯ್ಕೆಯಾದರು.

Related posts

ಕೋಟಿ ಚೆನ್ನಯ ಕ್ರೀಡಾ ಸಂಭ್ರಮದ ಸಂಚಾಲಕರ ಆಯ್ಕೆ

Madhyama Bimba

ಡಿಜೆಯಲ್ಲಿ ರೊಬೋಟಿಕ್ ಲ್ಯಾಬ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಲ್ಯಾಬ್ ಉದ್ಘಾಟನೆ

Madhyama Bimba

ಎಕ್ಸಲೆಂಟ್ ಶಾಲೆಗೆ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More