ಕಾರ್ಕಳಹೆಬ್ರಿ

ದೊಂಡೇರಂಗಡಿ: ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ

ದೊಂಡೇರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ವರ್ಗಾವಣೆಗೊಂಡ ಹಾಗೂ ನಿವೃತ್ತಿ ಹೊಂದಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಶ್ರೀ ರಾಮ ಮಂದಿರ ದೊಂಡೇರಂಗಡಿ ಇಲ್ಲಿ ಆಯೋಜಿಸಲಾಗಿತ್ತು.


ಕುಕ್ಕುಜೆ, ಕಡ್ತಲ, ಎಳ್ಳಾರೆ ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಆಯೋಜನೆಗೊಂಡ ಈ ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ವೈದ್ಯಾಧಿಕಾರಿ ಡಾ.ಚಂದ್ರಿಕಾ ಕಿಣಿ, ಪ್ರಯೋಗಶಾಲಾ ಅಧಿಕಾರಿ ಸತೀಶ್ ಕಾಮತ್ ಮತ್ತು ಶುಶ್ರೂಷಣಾಧಿಕಾರಿ ಸುಲೋಚನಾ ಕೆ. ಇವರನ್ನು ಗೌರವಿಸಿ ಬೀಳ್ಕೊಡಲಾಯಿತು.

ನಿವೃತ್ತಿ ಹೊಂದಿದ ಸುರಕ್ಷಾಧಿಕಾರಿ ಶ್ರೀಮತಿ ಪಾಪಕ್ಕ ಟಿ., ಕೇಂದ್ರದ ಉದ್ಯೋಗಿ ಶ್ರೀಮತಿ ಪಾರ್ವತಿ ಮತ್ತು ಆಶಾ ಕಾರ್ಯಕರ್ತೆ ಶ್ರೀಮತಿ ಬೇಬಿ ಎಳ್ಳಾರೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಯೋಧ ವಿಶ್ವನಾಥ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ಡಿ. ಲಕ್ಷ್ಮಣ್, ಶ್ರೀನಿವಾಸ್ ಭಟ್, ರಾಘವ ದೇವಾಡಿಗ ಉಪಸ್ಥಿತರಿದ್ದರು.

ಅಜಿತ್ ದೇವಾಡಿಗ ಸ್ವಾಗತಿಸಿ, ವಿನಯ್ ಆರ್. ಭಟ್ ವಂದಿಸಿದರು. ಪ್ರಸನ್ನ ಶೆಟ್ಟಿಗಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸಂಪತ್ ಪೂಜಾರಿ, ಹರೀಶ್ ದುಗ್ಗನ್ ಬೆಟ್ಟು, ರಾಘವ ಕೆ, ಜಗದೀಶ್ ಹೆಗ್ದೆ, ಸುನಿಲ್ ಹೆಗ್ಡೆ, ದೀಕ್ಷಿತ್ ಶೆಟ್ಟಿ, ಪ್ರಸನ್ನ ದೇವಾಡಿಗ,ಶಶಿಕಲಾ ಭಟ್, ರೇಖಾ ಮತ್ತಿತ್ತರರು ಸಹಕರಿಸಿದರು.

Related posts

ಹೆಬ್ರಿ: ಮಾದಕ ದ್ರವ್ಯ ವಿರೋಧಿ ದಿನಾಚರಣೆ

Madhyama Bimba

ಭಾಂದವ ಕಪ್2026: ಕ್ರೈಸ್ಟ್‌ಕಿಂಗ್ ಶಾಲೆಯ ಬಾಲಕಿಯರ ವಾಲಿಬಾಲ್ ತಂಡಕ್ಕೆ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ

Madhyama Bimba

ಕೈಸ್ಟ್‌ಕಿಂಗ್: ಕ್ರಿಕೆಟ್‌ನಲ್ಲಿ ಪ್ರಾಥಮಿಕ ವಿಭಾಗದ ಐವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More