ಕಾರ್ಕಳಮೂಡುಬಿದಿರೆಹೆಬ್ರಿ

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ: ರೂ.1200 ಕೋಟಿ ವ್ಯವಹಾರ

ರಾಜ್ಯದ ಪ್ರತಿಷ್ಠಿತ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊಂದಾದ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಸಹಕಾರ ಮಾಣಿಕ್ಯ ಪ್ರಶಸ್ತಿ ವಿಜೇತ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು 2025-26ನೇ ಸಾಲಿನ ವಿತ್ತೀಯ ವರ್ಷದ 3ನೇ ತ್ರೈಮಾಸಿಕ ಅವಧಿ ದಿನಾಂಕ 31.12.2025ಕ್ಕೆ ರೂ.660ಕೋಟಿ ಠೇವಣಿ, ರೂ.558ಕೋಟಿ ಸಾಲ, ರೂ.1218ಕೋಟಿ (ಠೇವಣಿ ಮತ್ತು ಸಾಲ) ವ್ಯವಹಾರವನ್ನು ಹೊಂದಿದೆ. 2024ನೇ ಡಿಸೆಂಬರ್ 31ಕ್ಕೆ ಹೋಲಿಸುವಾಗ ಠೇವಣಾತಿಯಲ್ಲಿ ರೂ.96ಕೋಟಿ 17% ವೃದ್ಧಿ, ಹೊರಬಾಕಿ ಸಾಲದಲ್ಲಿ ರೂ.72ಕೋಟಿ ಹೆಚ್ಚಳ15% ವೃದ್ಧಿಯೊಂದಿಗೆ, ಒಟ್ಟು ವ್ಯವಹಾರದಲ್ಲಿ ರೂ.168ಕೋಟಿ ವೃದ್ಧಿಯಿಂದ 16% ಹೆಚ್ಚಳವನ್ನು ಸಾಧಿಸಿದೆ.


31.12.2025ಕ್ಕೆ ನಿವ್ವಳ ಲಾಭವು ರೂ.10.22ಕೋಟಿ ದಾಖಲಿಸಿದ್ದು, ಇದು ಕಳೆದ ವರ್ಷಕ್ಕಿಂತ ರೂ.1.39 ಕೋಟಿ ಹೆಚ್ಚಳವಾಗಿ 16% ವೃದ್ಧಿಯಾಗಿರುತ್ತದೆ. ಸ್ಥಾಪನೆಯಾದನಿಂದ ನಿರಂತರ ಡಿವಿಡೆಂಡನ್ನು ನೀಡುತ್ತಾ ಬಂದ ಸೊಸೈಟಿ, 2024-25ನೇ ಸಾಲಿಗೆ ಶೇ.25ಡಿವಿಡೆಂಡನ್ನು ನೀಡಿದ್ದು, ಕಳೆದ ಏಳು ವರ್ಷಗಳಿಂದ ಗರಿಷ್ಟ 25% ಡಿವಿಡೆಂಡನ್ನು ನೀಡುತ್ತಿದೆ.


ಸಂಘದ ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ 18 ವರ್ಷಗಳಿಂದ ಶೂನ್ಯ ಪ್ರಮಾಣದಲ್ಲಿದ್ದು, ಸಾಲ ಮರುಪಾವತಿಯು ಉತ್ತಮವಾಗಿರುತ್ತದೆ.

31.03.2026ಕ್ಕೆ ಒಟ್ಟು ವ್ಯವಹಾರದ ಗುರಿ ರೂ.1300ಕೋಟಿಯಾಗಿದ್ದು, ಅದನ್ನು ತಲುಪಲು ಸರ್ವ ಪ್ರಯತ್ನ ಮಾಡಲಾಗಿದೆ ಹಾಗೂ ಸಂಘದ ನಿರಂತರ ಪ್ರಗತಿಗೆ ಸಹಕರಿಸುತ್ತಿರುವ ಸಂಘದ ಎಲ್ಲಾ ಆಡಳಿತ ಮಂಡಳಿ ಸದಸ್ಯರುಗಳಿಗೆ, ಶಾಖಾ ಸಲಹಾ ಸಮಿತಿ ಅಧ್ಯಕ್ಷರುಗಳಿಗೆ ಹಾಗೂ ಸದಸ್ಯರುಗಳಿಗೆ, ಸಂಘದ ಸರ್ವ ಸದಸ್ಯ ಬಾಂಧವರಿಗೆ ಮತ್ತು ಹಿತೈಷಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಂಘದ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಸಂಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related posts

ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿ ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನ ಆಚರಣೆ

Madhyama Bimba

ಕಾರ್ಕಳ: ಟ್ರಾಕ್ಟರ್‌ನಿಂದ ಬಿದ್ದು ಮೃತ್ಯು

Madhyama Bimba

ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಕಾರ್ಕಳದ 35 ಕಡೆಗಳಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More