ಕಾರ್ಕಳಹೆಬ್ರಿ

ನಾಡ್ಪಾಲು ಗ್ರಾಮದಲ್ಲಿ ಹುಲಿ, ಚಿರತೆಗಳ ಉಪಟಳ: ಸಾಕು ಪ್ರಾಣಿಗಳಿಗಿಲ್ಲ ರಕ್ಷಣೆ

ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದಲ್ಲಿ ಹುಲಿ, ಚಿರತೆಗಳ ಉಪಟಳ ಹೆಚ್ಚಾಗಿದ್ದು, ಕೆಲವು ದಿನಗಳಿಂದ ಬೆಳಾರೆ ಪರಿಸರದ ರಫೀಕ್ ಎಂಬವರ ದನದ ಹಟ್ಟಿಗೆ ಹುಲಿ ದಾಳಿ ನಡೆಸಿ ಸುಮಾರು 5 ದನಗಳನ್ನು ಕೊಂದು ಹಾಕಿದೆ. ಅಲ್ಲದೆ ಸುತ್ತಮುತ್ತಲಿನ ಮನೆಗಳಲ್ಲಿನ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.


ಅಲ್ಲದೆ ಅರಣ್ಯ ಇಲಾಖಾ ಅಧಿಕಾರಿಗಳು ಸ್ಥಳ ಭೇಟಿ ನೀಡದೇ ಇರುವುದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಲಿ, ಚಿರತೆ ಇತರ ಕಾಡು ಪ್ರಾಣಿಗಳಿಂದ ಗ್ರಾಮಸ್ಥರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಅರಣ್ಯ ಇಲಾಖಾ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

Related posts

ಕಾರ್ಕಳ: ಮಲಗಿದ್ದಲ್ಲಿಯೇ ಮೃತ್ಯು

Madhyama Bimba

ಉಡುಪಿ ಜಿಲ್ಲಾ ಕುಪ್ಮಾ ಸಮಿತಿ ಪದಗ್ರಹಣ

Madhyama Bimba

ಜೇಸಿ ಇಂಟರ್ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More