ಕಾರ್ಕಳಹೆಬ್ರಿ

ಕಡ್ತಲ ಅಂಗನವಾಡಿ ಮಕ್ಕಳಿಗೆ ಬ್ಯಾಗ್ ವಿತರಣೆ

ಕಡ್ತಲ ಅಂಗನವಾಡಿ ಕೇಂದ್ರದಲ್ಲಿ ದಾನಿ ಸನ್ ಕ್ರಿಯೇಶನ್ ಬೆಂಗಳೂರು ಮಾಲಕರಾದ ಗೌರವಾನ್ವಿತ ಪಾಂಡುರಂಗ ನಾಯಕ್ ಅವರು ನೀಡಿದ ಉಚಿತ ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಐ.ಎ.ಎಸ್ ಅಧಿಕಾರಿ ಸದಾಶಿವ ಪ್ರಭು ಬ್ಯಾಗ್ ವಿತರಣೆ ಮಾಡಿ ಅಂಗನವಾಡಿ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸುಷ್ಮಾ, ನಿಕಟಪೂರ್ವ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸುಕೇಶ್ ಹೆಗ್ಡೆ, ಅರುಣ್ ಕುಮಾರ್ ಹೆಗ್ಡೆ, ದಾನಿಗಳ ಸಹೋದರ ಪುರಂದರ ನಾಯಕ್, ಸಂಜೀವ ಪೂಜಾರಿ, ಮೋಹನ್ ದಾಸ್ ನಾಯಕ್, ಚಂದ್ರಕಾಂತ ಹೆಗ್ಡೆ, ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಶ್ವೇತಾ ಸತೀಶ್ ಹೆಗ್ಡೆ ಸ್ವಾಗತಿಸಿ ನಿರೂಪಿಸಿದರು. ಬಾಲವಿಕಾಸ ಸಮಿತಿಯವರು, ಮಕ್ಕಳ ಪೋಷಕರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಇನ್ನಿತರರು ಉಪಸ್ಥಿತರಿದ್ದರು.

Related posts

ಕಾರ್ಕಳ ರೋಟರಿ ಕ್ಲಬ್‌ಗೆ ‘ಕ್ಲಬ್ ಎಕ್ಸಲೆನ್ಸ್ ಅವಾರ್ಡ್’ ಗೌರವ- ದೊಡ್ಡ ಕ್ಲಬ್‌ಗಳ ವಿಭಾಗದಲ್ಲಿ ದ್ವಿತೀಯ ಸ್ಥಾನ

Madhyama Bimba

ನಿವೃತ್ತ ಯೋಧ ನೀರೆ ಸಹದೇವ ನಾಯಕ್ ನಿಧನ

Madhyama Bimba

ಅಶಕ್ತ ಕುಟುಂಬಕ್ಕೆ ನೂತನ ಗ್ರಹ ನಿರ್ಮಾಣದ ಆಸರೆ: ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಮಾದರಿ ಕಾರ್ಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More