ಕಾರ್ಕಳಹೆಬ್ರಿ

ಹೆಬ್ರಿ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ಮೃತ್ಯು

ಹೆಬ್ರಿ : ಹೆಬ್ರಿಯ ಬ್ರಹ್ಮಾವರ ರಸ್ತೆಯಿಂದ ಹೆಬ್ರಿಯ ಕಡೆಗೆ ಬರುತ್ತಿರುವಾಗ ಬ್ರಹ್ಮಾವರ ರಸ್ತೆ ಮೂರುರಸ್ತೆ ಹುತ್ತುರ್ಕೆ ಬಳಿ ಕಾರಿನ ಮೇಲೆ ಬೃಹತ್ ಮರ ಬಿದ್ದು ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಮೃತ ಪಟ್ಟ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.


ಕಳ್ಳೂರು ಗ್ರಾಮದ ದರ್ಖಾಸು ಮನೆ ನಿವಾಸಿ ಸದಾನಂದ ನಾಯಕ್ ಮೃತಪಟ್ಟವರು.


ಕೆಲವೇ ದಿನಗಳ ಹಿಂದೇ ಅದೇ ಪರಿಸರದಲ್ಲಿ ರಸ್ತೆ ಮೇಲೆ ಮರ ಬಿದ್ದು ಯುವತಿ ಅಪಾಯದಿಂದ ಪಾರಾಗಿದ್ದರು.
ಸದಾನಂದ ನಾಯಕ್ ಅವರು ಬಸ್‌ಗೆ ಪಾರ್ಸೆಲ್ ಹಾಕಲು ಬರುವಾಗ ಘಟನೆ ನಡೆದಿದೆ.


ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಬಂದು ಕಾರಿನ ಒಳಗೆ ಇದ್ದ ಸದಾನಂದ ನಾಯಕ್ ಮೃತದೇಹವನ್ನು ಹೊರತೆಗೆಯಲಾಯಿತು.

Related posts

ಪಡುಕುಡೂರು ಶಾಲೆ: ಚಿಗುರು ಇಕೋ ಕ್ಲಬ್ ಉದ್ಘಾಟನೆ

Madhyama Bimba

ಗಣೇಶ್‌ ಕೆ. ಶೆಟ್ಟಿ ಸಾರಥ್ಯದಲ್ಲಿ ತುಳುಕೂಟ ಗೋವಾ ಲೋಕಾರ್ಪಣೆ – ಸಂಭ್ರಮದ ಕಾರ್ಯಕ್ರಮ

Madhyama Bimba

ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More