ಕಾರ್ಕಳ ಸರಕಾರಿ ಆಸ್ಪತ್ರೆಯ ವ್ಯವಸ್ಥೆ ಸರಿಪಡಿಸಲು ಹಾಗೂ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಲು ಸಚಿವರಿಗೆ ಕಾಂಗ್ರೆಸ್ ನಿಯೋಗ ಮನವಿ
ಕಾರ್ಕಳ ಸಾರ್ವಜನಿಕ ಸರಕಾರಿ ಅಸ್ಪತ್ರೆಯಲಿನ ಕೆಲವು ಸಮಸ್ಯೆಗಳಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತಿದ್ದು ಅದನ್ನು ಅತಿ ಶೀಘ್ರವಾಗಿ ಸರಿಪಡಿಸುವಂತೆ ಮಾನ್ಯ ಆರೋಗ್ಯ ಸಚಿವರಾದ ಯು.ಟಿ. ಖಾದರ್ ರವರಿಗೆ ಕಾಂಗ್ರೆಸ್ ಕಛೇರಿಯಲ್ಲಿ ಕಾಂಗ್ರೆಸ್ ನಿಯೋಗ ಮನವಿ ಸಲ್ಲಿಸಿತು.
ಮಾನ್ಯ ಸಿದ್ದರಾಮಯ್ಯರವರು ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಸ್ವತಃ ಯು.ಟಿ. ಖಾದರ್ ರವರೇ ಆರೋಗ್ಯ ಸಚಿವರಾಗಿ ನೀಡಿದ ಅನುಧಾನದ ಫಲವಾಗಿ ರೂ 9 ಕೋಟಿ ವೆಚ್ಚದಲ್ಲಿ ಆಸ್ಪತ್ರೆಗೆ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ ಆದರೆ ನಿರ್ವಹಣ ಜವಾಬ್ದಾರರ ನಿರ್ಲಕ್ಷದ ಪರಿಣಾಮವಾಗಿ ಸಾರ್ವಜನಿಕರು ಕೆಲವು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಅದನ್ನು ಅತೀ ಶೀಘ್ರವಾಗಿ ಸರಿಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಹಾಗೂ ಬ್ಲಾಕ್ ಅಧ್ಯಕ್ಷರಾದ ಶುಭದರಾವ್ ಮೂಲಕ ನೀಡಿದ ಮನವಿಯಲ್ಲಿ ವಿನಂತಿಸಲಾಗಿದೆ.
ರಾತ್ರಿಯಲ್ಲಿ ತುರ್ತು ಚಿಕಿತ್ಸೆಗೆ ವೈದ್ಯರ ಅಲಭ್ಯ, ಮಕ್ಕಳ ವಿಭಾಗ, ಸ್ಕಾನಿಂಗ್ ಮತ್ತು ಎಕ್ಸರೇ ವಿಭಾಗದಲ್ಲಿ ವೈದ್ಯರ ಹಾಗೂ ಸಿಬಂದಿಗಳ ಕೊರತೆ, ಸರಕಾರಿ ರಜಾ ದಿನಗಳಲ್ಲಿ ವೈದ್ಯರ ಅಲಭ್ಯ ಮೊದಲಾದ ಸಮಸ್ಯೆಗಳನ್ನು ಮನವಿಯಲ್ಲಿ ಉಲ್ಲೆಖಿಸಲಾಗಿದೆ. ಹಾಗೂ ತಾಲೂಕಿನ ಬಜಗೋಳಿ ಮತ್ತು ಅಜೆಕಾರ್ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಲು ಮತ್ತು ದೊಡ್ಡರಂಗಡಿ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಅನುದಾನಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಬದಲ್ಲಿ ಹೆಬ್ರಿ ಬ್ಲಾಕ್ ಅಧ್ಯಕ್ಷರಾದ ಗೋಲಪಿ
