ಮೂಡುಬಿದಿರೆ: ಮೂಡುಬಿದಿರೆ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಜವನೆರ್ ಬೆದ್ರ ಫೌಂಡೇಶನ್ ಆಯೋಜಿಸಿರುವ ’ಬೆದ್ರದ ಕೃಷ್ಣೋತ್ಸವ 2026’ ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅವರಿಗೆ ಪ್ರತಿಷ್ಠಿತ ’ಕೃಷ್ಣೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ.
ಸೆಪ್ಟೆಂಬರ್ 5ರಂದು ಮೂಡುಬಿದಿರೆಯ ಕೆ. ಅಮರನಾಥ ಶೆಟ್ಟಿ ವೃತ್ತದ ಬಳಿಯ ವೇಣೂರು ಕೃಷ್ಣಯ್ಯ ವೇದಿಕೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬೆದ್ರದ ಕೃಷ್ಣೋತ್ಸವದ ವಿವಿಧ ಸ್ಪರ್ಧೆಗಳ ಉದ್ಘಾಟನೆ, ಸಭಾ ಕಾರ್ಯಕ್ರಮ ಹಾಗೂ ’ಅಷ್ಟಮಿದ ಪಿಲಿಗೊಬ್ಬು’ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ.
ಶಿಕ್ಷಣ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಯುವರಾಜ್ ಜೈನ್ ಅವರು ಸಲ್ಲಿಸಿದ ಅನನ್ಯ ಸೇವೆಗಾಗಿ ಈ ಹಿಂದೆಯೂ ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಅವರು ಪಡೆದ ಪ್ರಮುಖ ಪ್ರಶಸ್ತಿಗಳ ವಿವರ ಹೀಗಿದೆ:
ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಶಿಕ್ಷಣ ಶ್ರೇಷ್ಠತಾ ಪ್ರಶಸ್ತಿ (2026): ನವದೆಹಲಿಯಲ್ಲಿ ಎಕನಾಮಿಕ್ ಗ್ರೋತ್ ಫೋರಂ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಹರಿಯಾಣ ವಿಶ್ವವಿದ್ಯಾಲಯದ ಕುಲಪತಿ ಪ್ರೊ. (ಡಾ.) ರಾಮ್ ಪಾಲ್ ಸೈನಿ ಅವರಿಂದ ಪ್ರದಾನ.
ಕೇಶವಾನಂದ ಭಾರತಿ ಶಿಕ್ಷಣ ಪ್ರಶಸ್ತಿ (2025): ಡಾ. ಕ್ಷೀಳಾರು ಗೋಪಾಲಕೃಷ್ಣ ಪ್ರತಿಷ್ಠಾನ, ಸಂಪಾಜೆ ಇವರಿಂದ.
ಕರ್ನಾಟಕದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಪ್ರಶಸ್ತಿ (2025): ಸಿಂಗಾಪುರದಲ್ಲಿ ನಡೆದ ಅಂತರರಾಷ್ಟ್ರೀಯ ಜೈನ್ ಸಮ್ಮೇಳನ2025ರಲ್ಲಿ ಪ್ರದಾನ.
ಶಿಕ್ಷಣಭೀಷ್ಮ ಪ್ರಶಸ್ತಿ (2024-25): ಅಂಗೀಕೃತ ಅನುದಾನರಹಿತ ಖಾಸಗಿ ಶಾಲಾ ಸಂಘ, ಬೆಂಗಳೂರು ಇವರಿಂದ.
ವಿಶ್ವಶಾಂತಿ ವಿದ್ಯಾ ಸೇವಾರತ್ನ ಪ್ರಶಸ್ತಿ (2024): ಬೆಂಗಳೂರಿನ ವಿಶ್ವಶಾಂತಿ ಯುವ ಸೇವಾ ಸಮಿತಿಯಿಂದ.
ಸಿರಿಪುರ ಪ್ರಶಸ್ತಿ (2024): ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನ, ಮೂಡುಬಿದಿರೆ ಇವರಿಂದ.
ಸಮಾಜ ಮಂದಿರ ಪುರಸ್ಕಾರ (2023): ಮೂಡುಬಿದಿರೆ ’ಸಮಾಜ ಮಂದಿರ ಸಭಾ’ ಇವರಿಂದ.
ರಾಷ್ಟ್ರೀಯ ಪ್ರಶಸ್ತಿ (Global Ambassador of Education Excellence Award) (2023): ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ಅಂಡ್ ಮ್ಯಾನೇಜ್‌ಮೆಂಟ್, ನವದೆಹಲಿ ಇವರಿಂದ.
ಮಿಲನಶ್ರೀ ಪ್ರಶಸ್ತಿ (2022): ಭಾರತೀಯ ಜೈನ್ ಮಿಲನ್ ಇವರಿಂದ.
ಶಿಕ್ಷಣ ರತ್ನ ಪ್ರಶಸ್ತಿ (2021): ಜಿನಗಾನ ಸುಧ ಬಳಗ ಮತ್ತು ಶ್ರುತಸ್ಕಂಧ ಇವರಿಂದ.
ಸಾಧನಶ್ರೀ ಪ್ರಶಸ್ತಿ ಹಾಗೂ ಕಮಲ ಪತ್ರ ರಾಷ್ಟ್ರೀಯ ಪ್ರಶಸ್ತಿ: ಅಂತರರಾಷ್ಟ್ರೀಯ ಜೆಸಿಐ ಸಂಸ್ಥೆಯಿಂದ ಸಮಾಜಕ್ಕೆ ಸಲ್ಲಿಸಿದ ಅಮೂಲ್ಯ ಸೇವೆಗಾಗಿ.
ಇದೀಗ ’ಕೃಷ್ಣೋತ್ಸವ ಪ್ರಶಸ್ತಿ’ ಈ ಗೌರವಗಳ ಸಾಲಿಗೆ ಸೇರ್ಪಡೆಗೊಳ್ಳಲಿದ್ದು, ಶಿಕ್ಷಣ ಹಾಗೂ ಸಮಾಜ ಸೇವೆಯಲ್ಲಿ ಯುವರಾಜ್ ಜೈನ್ ಅವರ ಅವಿರತ ಕೊಡುಗೆಗೆ ಸಂದ ಮತ್ತೊಂದು ಮನ್ನಣೆಯಾಗಿದೆ. ಈ ಗೌರವ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಸಮಸ್ತ ಬಳಗಕ್ಕೂ ಹೆಮ್ಮೆಯ ವಿಷಯವಾಗಿದೆ.
