ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಆ. 11 ಮತ್ತು 12ರಂದು ನಡೆದ ಕರ್ನಾಟಕ ಸ್ಟೇಟ್ ಜೂನಿಯರ್ ಅಥ್ಲೆಟಿಕ್ ಮೀಟ್‌ನಲ್ಲಿ 800ಮೀಟರ್ ಹಾಗೂ 1500 ಮೀಟರ್ ಓಟದಲ್ಲಿ ಕಾರ್ಕಳದ ಸಮೃದ್ಧಿ ರಾವ್ ಭಾಗವಹಿಸಿ ಕಂಚಿನ ಪದಕವನ್ನು ಪಡೆದಿರುತ್ತಾರೆ.
ಇವರು ಕಾರ್ಕಳ ಮಾಜಿ ಪುರಸಭಾ ಸದಸ್ಯ ಸಂತೋಷ್ ರಾವ್ – ಸವಿತಾ ದಂಪತಿಗಳ ಪುತ್ರಿ.
ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದು, ಡಾ. ಗಣೇಶ್ ಪೂಜಾರಿ ಇವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.
