ಕಾರ್ಕಳ

ಕಾರ್ಕಳ ಸರಕಾರಿ ಪಾಲಿಟೆಕ್ನಿಕ್‌ನಲ್ಲಿ ರೋಟರಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಪ್ರಾಯೋಜಕತ್ವದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾರ್ಕಳ, ಕಾಬೆಟ್ಟು ಇದರ 2026-27ನೇ ಸಾಲಿನ ರೋಟರಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆ. 13ರಂದು ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.

ಪದಗ್ರಹಣ ಅಧಿಕಾರಿಯಾಗಿ ರೊ. ಡಾ. ಭರತೇಶ್ ಆದಿರಾಜರವರು ನೂತನ ಅಧ್ಯಕ್ಷರಿಗೆ ಲಾಂಛನವನ್ನು ಹಸ್ತಾಂತರಿಸಿದರು.
ರೋಟರಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಕು. ಸುಜನ್ ಹಾಗೂ ಕಾರ್ಯದರ್ಶಿ ಕು. ಕೌಶಿಕ್ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಅಧ್ಯಕ್ಷರಾದ ರೊ ಮಂಜುನಾಥ ಹೆಗ್ಡೆ ಯವರು ವಹಿಸಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಸಹನಾ, ಸಂಸ್ಥೆಯ ಸಿವಿಲ್ ವಿಭಾಗದ ವಿಭಾಗಾಧಿಕಾರಿಗಳು ಹಾಗೂ ರೋಟರಾಕ್ಟ್ ಕ್ಲಬ್ ಸಂಚಾಲಕರಾದ ಚಿತ್ರಕುಮಾರ್ ಕೆ.ವಿ, ಕಂಪ್ಯೂಟರ್ ಸೈನ್ಸ್ ವಿಭಾಗಧಿಕಾರಿ ಕುಮಾರ ಕೆ. ಎಂ., ಬಾಲಚಂದ್ರ ಹೆಬ್ಬಾರ್, ಕಛೇರಿ ಮುಖ್ಯಸ್ಥರಾದ ಗುಣಪಾಲ ಜೈನ್ ಉಪಸ್ಥಿತರಿದ್ದರು.

ರೋಟರಿ ಕ್ಲಬ್‌ನ ಪೂರ್ವ ಅಧ್ಯಕ್ಷರಾದ ರೊ.ಉಪೇಂದ್ರ ವಾಗ್ಲೆಯವರು ಈ ಸಂದರ್ಭದಲ್ಲಿದ್ದರು.

Related posts

ಜೇಸಿ ಇಂಟರ್ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಮಮತ ಕೆ.

Madhyama Bimba

ಕರಾವಳಿ ರಂಗಾಯಣವೇ ಸರಿಯಾದ ಮತ್ತು ಸೂಕ್ತ ಹೆಸರು. ಬಿವಿಕಾರಂತರ ಅಪೇಕ್ಷೇಯು ಅದೇ ಆಗಿತ್ತು – ಶುಭದರಾವ್ ಕಾರ್ಕಳ

Madhyama Bimba

ಶಾಲಾ ಬಸ್ಸಿನ ಚಾಲಕನಿಗೆ ಹಲ್ಲೆ: ಪ್ರಕರಣ ದಾಖಲು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More