ಮೂಡುಬಿದಿರೆ

ಮೂಡುಬಿದಿರೆ ಯುವ ಬಂಟರ ಸಂಘದ ಕಾರ್ಯಕಾರಿ ಸಭೆ- ಗ್ರಾಮ ಗ್ರಾಮಗಳಲ್ಲಿ ಸಮಾಜವನ್ನು ಸಂಘಟಿಸಲು ಯುವ ಬಂಟರ ನಿರ್ಧಾರ

ಮೂಡುಬಿದಿರೆ: ಯುವ ಬಂಟರ ಸಂಘ ಮೂಡುಬಿದಿರೆ ಇದರ ಕಾರ್ಯಕಾರಿ ಸದಸ್ಯರ ಸಭೆಯು ಆ. 23, ಭಾನುವಾರ ಮೂಡುಬಿದಿರೆಯ ಹೋಟೆಲ್ ಪಂಚರತ್ನದಲ್ಲಿ ನಡೆಯಿತು.


ಬಂಟರ ಸಂಘದ ಅಧ್ಯಕ್ಷರಾದ ತಿಮ್ಮಯ್ಯ ಶೆಟ್ಟಿಯವರು ಮಾತನಾಡಿ, ಬಂಟ ಸಮಾಜದ ಪ್ರತಿಯೊಬ್ಬರೂ ಒಂದೇ ಮನಸ್ಸಿನಿಂದ ಒಗ್ಗಟ್ಟಾಗಿ ಸಂಘಟಿತರಾಗುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಯುವ ಬಂಟರ ಸಂಘದ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಬೆಳುವಾಯಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕಾರ್ಯಕಾರಿ ಸದಸ್ಯರ ಸಭೆಯನ್ನು ಕರೆದ ಉದ್ದೇಶ, ಹಾಗೂ ಸಂಘಟನೆಯನ್ನು ಇನ್ನಷ್ಟು ಕ್ರಿಯಾಶೀಲ ಮತ್ತು ಬಲಿಷ್ಠವಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಆಳ್ವಾಸ್‌ ಎಜುಕೇಶನ್‌ ಟ್ರಸ್ಟ್‌ನ ಟ್ರಸ್ಟಿ ಮತ್ತು ಯುವ ಬಂಟರ ಸಂಘದ ಗೌರವಾಧ್ಯಕ್ಷರಾದ ವಿವೇಕ್ ಆಳ್ವ ಅವರು ಮಾತನಾಡಿ, ಸದಸ್ಯತ್ವ ನೋಂದಾವಣೆಯ ಸಮಗ್ರ ಮಾಹಿತಿ, ಸಮಯ ಪಾಲನೆ ಹಾಗೂ ಯುವ ಸಂಘಟನೆಯ ಒಗ್ಗಟ್ಟಿನ ಮಹತ್ವದ ಕುರಿತು ವಿವರಿಸಿದರು.

ಗೌರವಾಧ್ಯಕ್ಷರಾದ ಜಯಕುಮಾರ್ ಶೆಟ್ಟಿಯವರು ಮಾತನಾಡಿ ಯುವ ಬಂಟರ ಸಂಘವು ಈ ಹಿಂದೆ ಮಾಡಿದಂತಹ ಸಾಧನೆಗಳನ್ನು ಸ್ಮರಿಸಿ, ಯುವ ಸಂಘಟನೆಯು ಗ್ರಾಮ ಗ್ರಾಮಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಂಘಟನೆ ಮತ್ತಷ್ಟು ಬಲಿಷ್ಠವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ರವಿಪ್ರಸಾದ್ ಶೆಟ್ಟಿ ಅವರು ಸಂಘಟನೆಯಲ್ಲಿ ಯುವಶಕ್ತಿಯ ಪಾತ್ರದ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಬಂಟರ ಸಂಘ (ರಿ.) ಮೂಡುಬಿದಿರೆಯ ಕಾರ್ಯದರ್ಶಿ ಸುಚರಿತ ಶೆಟ್ಟಿ, ಕೋಶಾಧಿಕಾರಿ ಪುರುಷೋತ್ತಮ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶೋಭಾ ಹೆಗ್ಡೆ ಮತ್ತು
ಯುವ ಬಂಟರ ಸಂಘದ ಕಾರ್ಯದರ್ಶಿ ರಮೇಶ್ ಶೆಟ್ಟಿ ಮಿಜಾರು, ಕೋಶಾಧಿಕಾರಿ ಭರತ್ ಶೆಟ್ಟಿ ಹಾಗೂ ಯುವ ಬಂಟರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಅನುಷಾ ಶೆಟ್ಟಿ ಸ್ವಾಗತಿಸಿದರು. ಶರತ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ನಿಹಾರಿಕ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related posts

ಪ್ರಸಾದ್ ನೇತ್ರಾಲಯ ನೇತೃತ್ವದಲ್ಲಿ ವೈದ್ಯರ ದಿನಾಚರಣೆ

Madhyama Bimba

ಅ. 28 ರಂದು ಸರಕಾರಿ ನೌಕರರ ಸಂಘದ ಚುನಾವಣೆ

Madhyama Bimba

 ಕಲ್ಲಿನ ಕೋರೆಗೆ ಉರುಳಿದ ಲಾರಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More