ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರಿ ಸಂಘವು ಆರ್ಥಿಕ ವರ್ಷದಲ್ಲಿ ರೂ. 218.48 ಕೋಟಿ ವ್ಯವಹಾರ ನಡೆಸಿ ರೂ. 51.13 ಲಕ್ಷ ನಿವ್ವಳ ಲಾಭಗಳಿಸಿದೆ ವಾರ್ಷಿಕ ಸಾಲಿನ ಅಂತ್ಯಕ್ಕೆ ಸಂಘವು ರೂ.36.69 ಲಕ್ಷ ಪಾಲು ಬಂಡವಾಳ ಇದ್ದು ರೂ. 48.10 ಕೋಟಿ ಠೇವಣಿ ಸಂಗ್ರಹವಾಗಿದ್ದು ರೂ. 38.48 ಕೋಟಿ ಸಾಲ ವಿತರಿಸಿದ್ದು ರೂ.54.08ಕೋಟಿ ದುಡಿಮೆ ಬಂಡವಾಳ ಹೊಂದಿರುತ್ತದೆ.

ಸಂಘದ ಅಧ್ಯಕ್ಷರಾದ ಸಂತೋಷ್ ರಾವ್ ಮಾತನಾಡಿ ಸಂಘದ2025-26ನೇ ಸಾಲಿನಲ್ಲಿ ಸಂಘದ ಪ್ರಗತಿಯನ್ನು ಹಾಗೂ ಸಂಘವು ಆರ್ಥಿಕ ಸಾಲಿನಲ್ಲಿ ನಡೆಸಿದ ಸಾಮಾಜಿಕ ಚಟುವಟಿಕೆಗಳ ಬಗ್ಗೆ ವಿವರಿಸಿದರು ಮತ್ತು ಸಂಘದ ಆಡಳಿತ ನಡೆಸಲು ಅನುವು ಮಾಡಿಕೊಟ್ಟ ಸದಸ್ಯ ಬಾಂಧವರಿಗೆ ಕೃತಜ್ಞತೆಯನ್ನು ಸಲ್ಲಿಸುವುದರೊಂದಿಗೆ ಸಂಘವು ಆರ್ಥಿಕ ಸಾಲಿನಲ್ಲಿ 25 ಸಂವತ್ಸರಗಳನ್ನು ಪೂರೈಸಿ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಯಲ್ಲಿರುವುದು ಹರ್ಷಾದಾಯಕ ವಾಗಿರುತ್ತದೆ. ಈ ಸುಸಂಧರ್ಭದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮ ಗಳನ್ನು ಈಗಾಗಲೇ ಹಮ್ಮಿಕೊಂಡು ಕಾರ್ಯಚರಿಸಿದ್ದು ಮುಂದಿನ ದಿನಗಳ ಲ್ಲಿಯು ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲದೇ ಸಂಘದ ಸದಸ್ಯರಿಗೆ ಸದುಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮನೋಭಾವ ಹೊಂದಿರುತ್ತೇವೆ ಎಂದು ತಿಳಿಸಿರುತ್ತಾರೆ.

ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಜಯಶ್ರೀ 2026-27ನೇ ಸಾಲಿನ ಬಜೆಟನ್ನು ಮಂಡಿಸಿದರು. ಯೋಗೀಶ್ ಸಾಲ್ಯಾನ್ ಮಹಾಸಭೆಯ ನೋಟೀಸನ್ನು ಓದಿ ದಾಖಲಿಸಿದರು. ದಿನೇಶ್ ಕುಮಾರ್ ವೈ2025-26ನೇ ಸಾಲಿನ ಬಜೆಟಿಗಿಂತ ಹೆಚ್ಚು ಖರ್ಚಾಗಿರುವುದನ್ನು ಓದಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು. ಸಂಘದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ 2025-26ನೇ ಸಾಲಿನಲ್ಲಿ ಅಧಿಕ ಅಂಕ ಗಳಿಸಿದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕರ ನೀಡಲಾಯಿತು ಮತ್ತು ವಿಶೇಷ ಪ್ರತಿಭಾನ್ವಿತ ಸಂಘದ ಗ್ರಾಹಕರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಉತ್ತಮ ಕಾರ್ಯನಿರ್ವಯಿಸಿದ ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸಲಾಯಿತು.

ಸಂದೀಪ್ ನಾಯಕ್ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳನ್ನು ಹಾಗೂ ಉತ್ತಮ ಕಾರ್ಯನಿರ್ವಹಿಸಿದ ಸಿಬ್ಬಂದಿಗಳ ಗುರುತಿಸುವ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸಂಘದ 25ನೇ ವರ್ಷದ ಬೆಳ್ಳಿಹಬ್ಬದ ವಾರ್ಷಿಕ ಸಭೆಯಲ್ಲಿ ವಿಶೇಷವಾಗಿ ಕುಕ್ಕುಂದೂರು ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ, ಕುಕ್ಕುಂದೂರು ಗ್ರಾಮ ಪಂಚಾಯತ್‌ನ ಸ್ವಚ್ಚಾತಾ ಕಾರ್ಯಕರ್ತರಿಗೆ ಹಾಗೂ ಸುಧೀರ್ಘ 17 ವರ್ಷಗಳ ಕಾಲ ಕುಕ್ಕುಂದೂರು ಪ್ರಾಥಮಿಕ ಆರೋಗ್ರ ಕೇಂದ್ರ ದಲ್ಲಿ ಸುರಾಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶ್ರೀಮತಿ ಕುಮುದಾವತಿ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಸಂತೋಷ್ ರಾವ್ ಉಪಾಧ್ಯಕ್ಷರಾದ ವೃಷಭರಾಜ್ ಕಡಂಬ, ನಿರ್ದೇಶಕರಾದ ಸಂದೀಪ್ ನಾಯಕ್, ತ್ರಿವಿಕ್ರಮ ಕಿಣಿ, ದಿನೇಶ್ ಕುಮಾರ್ ವೈ, ಯೋಗಿಶ್ ಸಾಲ್ಯಾನ್, ಪಾಂಡುರಂಗ ನಾಯಕ್, ಗಣೇಶ್, ಸಂಜೀವ ನಾಯ್ಕ್, ಶ್ರೀಮತಿ ಸುಶ್ಮೀತಾ ರಾವ್, ಶ್ರೀಮತಿ ದೀಪಾ ಎಸ್ ವಾಗ್ಳೆ, ಪುಷ್ಪರಾಜ್ ಎಸ್ ಶೆಟ್ಟಿ, ಅನಿಲ್ ಕುಮಾರ್ ಹಾಗೂ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಶ್ರೀ ಉಪಸ್ಥಿತರಿದ್ದರು

ಸಂಘವನ್ನು ಅಭಿವೃದ್ಧಿಯತ್ತ ಸಾಗುವಲ್ಲಿ ಸಹಕರಿಸಿದ ಆಡಳಿತ ಮಂಡಲಿ ನಿರ್ದೇಶಕರಿಗೆ, ಸಿಬ್ಬಂದಿ ವರ್ಗದವರಿಗೆ, ಹನಿದೈನಿಕ ಸಂಗ್ರಾಹಕರಿಗೆ, ಗ್ರಾಹಕ ಮಿತ್ರರಿಗೆ ಹಾಗೂ ಸಂಘದ ಸದಸ್ಯರಿಗೆ ಇಲಾಖಾಧಿಕಾರಿಯವರಿಗೆ ಸಂಘದ ಪರವಾಗಿ ಸಂಘದ ಅಧ್ಯಕ್ಷರು ಸಂತೋಷ್ ರಾವ್ ಕೃತಜ್ಞತೆಯನ್ನು ಸಲ್ಲಿಸಿದರು.
ಶ್ರೀಮತಿ ದೀಪಾ ಎಸ್ ವಾಗ್ಳೆ ಪ್ರಾರ್ಥಿಸಿದರು. ಶ್ರೀಮತಿ ಸುಶ್ಮೀತಾ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷರಾದ ವೃಷಭರಾಜ್ ಕಡಂಬ ಧನ್ಯವಾದವಿತ್ತರು. ಶ್ರೀಮತಿ ಪ್ರತಿಭಾ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು.
