ಕಾರ್ಕಳ

ಕಾರ್ಕಳ ರೋಟರಿ ಕ್ಲಬ್‌ಗೆ ‘ಕ್ಲಬ್ ಎಕ್ಸಲೆನ್ಸ್ ಅವಾರ್ಡ್’ ಗೌರವ- ದೊಡ್ಡ ಕ್ಲಬ್‌ಗಳ ವಿಭಾಗದಲ್ಲಿ ದ್ವಿತೀಯ ಸ್ಥಾನ

ಕಾರ್ಕಳ: ಸೇವಾ ಚಟುವಟಿಕೆಗಳು, ಸಮಾಜಮುಖಿ ಯೋಜನೆಗಳು ಹಾಗೂ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಗಮನ ಸೆಳೆದಿರುವ ಪ್ರತಿಷ್ಠಿತ ರೋಟರಿ ಕ್ಲಬ್ ಕಾರ್ಕಳಕ್ಕೆ 2025-26ನೇ ಸಾಲಿನಲ್ಲಿ ರೋಟರಿ ಇಂಟರ್‌ನ್ಯಾಷನಲ್ ಜಿಲ್ಲಾ 3182 ವತಿಯಿಂದ 32 ಪ್ರಶಸ್ತಿ ಗಳ ಜೊತೆಗೆ ಎರಡು ಮಹತ್ವದ ಗೌರವಗಳು ಲಭಿಸಿವೆ.


ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3182ರ ಡಿಸ್ಟ್ರಿಕ್ ಅವಾರ್ಡ್ 2025-26ರಲ್ಲಿ ಕಾರ್ಕಳ ರೋಟರಿ ಕ್ಲಬ್ ದೊಡ್ಡ ಕ್ಲಬ್‌ಗಳ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದೆ. ಈ ಸಾಧನೆಯ ಸಂಕೇತವಾಗಿ ಕ್ಲಬ್‌ಗೆ ಸುಂದರವಾದ ಟ್ರೋಫಿಯನ್ನು ನೀಡಿ ಗೌರವಿಸಲಾಗಿದೆ.

ಇದರೊಂದಿಗೆ, ರೋಟರಿ ಇಂಟರ್‌ನ್ಯಾಷನಲ್ ವತಿಯಿಂದ ನೀಡಲಾಗುವ ೨೦೨೫-೨೬ನೇ ಸಾಲಿನ ‘ಕ್ಲಬ್ ಎಕ್ಸಲೆನ್ಸ್ ಅವಾರ್ಡ್’ ಕೂಡ ರೋಟರಿ ಕ್ಲಬ್ ಕಾರ್ಕಳಕ್ಕೆ ದೊರೆತಿದೆ.
ಸದಸ್ಯರಿಗೆ ಉತ್ತಮ ಅನುಭವವನ್ನು ಒದಗಿಸುವುದರ ಜೊತೆಗೆ ರೋಟರಿಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ರೋ. ಕೆ. ನವೀನ್ ಚಂದ್ರ ಶೆಟ್ಟಿ ಹಾಗೂ ಕಾರ್ಯದರ್ಶಿ ರೋ. ಚೇತನ್ ನಾಯಕ್ ಅವರ ನೇತೃತ್ವದಲ್ಲಿ ಕ್ಲಬ್ ಶಿಕ್ಷಣ, ಆರೋಗ್ಯ, ಪರಿಸರ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರ ಪ್ರತಿಫಲವಾಗಿ ಈ ಗೌರವಗಳು ದೊರೆತಿವೆ.
ಜಿಲ್ಲಾ 3182ರ ಡಿಸ್ಟ್ರಿಕ್ಟ್ ಗವರ್ನರ್ ರೋ. ಕೆ. ಪಾಲಾಕ್ಷ, ಅಸಿಸ್ಟೆಂಟ್ ಗವರ್ನರ್ ರೋ. ವಿಘ್ನೇಶ್ ಶೆಣೈ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳ ಮಾರ್ಗದರ್ಶನ ಹಾಗೂ ಕ್ಲಬ್‌ನ ಎಲ್ಲ ಸದಸ್ಯರ ಸಹಕಾರ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ.

“ಪ್ರಶಸ್ತಿಗಳು ಕ್ಲಬ್‌ನ ಸಾಧನೆಯ ಅಂತ್ಯವಲ್ಲ; ಇನ್ನಷ್ಟು ಸಮಾಜಮುಖಿ ಸೇವೆ ಮಾಡಲು ಸ್ಫೂರ್ತಿ ನೀಡುವ ಮೈಲುಗಲ್ಲುಗಳು. ಕಾರ್ಕಳ ರೋಟರಿ ಕ್ಲಬ್‌ನ ಪ್ರತಿಯೊಬ್ಬ ಸದಸ್ಯರ ಪರಿಶ್ರಮ ಮತ್ತು ತಂಡದ ಒಗ್ಗಟ್ಟಿಗೆ ಈ ಪ್ರಶಸ್ತಿಗಳು ಸಂದ ಗೌರವವಾಗಿದೆ” ಎಂದು ಅಧ್ಯಕ್ಷ ರೋ. ಕೆ. ನವೀನ್ ಚಂದ್ರ ಶೆಟ್ಟಿ ತಿಳಿಸಿದ್ದಾರೆ.

Related posts

ಕಾರ್ಕಳ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ವಿಶ್ವ ಬೈಸಿಕಲ್ ದಿನ ಆಚರಣೆ

Madhyama Bimba

ಶಿವಪುರ-1 ಶಾಲೆಯಲ್ಲಿ ಯಕ್ಷ ಶಿಕ್ಷಣ ತರಗತಿಗಳ ಉದ್ಘಾಟನೆ ಹಾಗೂ ವಿವಿಧ ಕೊಡುಗೆಗಳ ವಿತರಣೆ

Madhyama Bimba

ಕಾರ್ಕಳದ ತೆಳ್ಳಾರು ರಸ್ತೆಯ ಬಳಿ ಪಾದಚಾರಿಗೆ ಬೈಕ್ ಡಿಕ್ಕಿ: ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More