ಇತ್ತೀಚಿಗೆ 24 ಹಾಗೂ 25 ತಾರೀಕು ಶಿವಮೊಗ್ಗ ಪ್ರೇರಣಾ ಆಡಿಟೋರಿಯ ನಲ್ಲಿ ಹಾಗೂ 7,8,ಸಪ್ಟಂಬರ್ ಮಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧಾಕೂಟದಲ್ಲಿ ಉಡುಪಿ ಜಿಲ್ಲೆಯ ಪೂರ್ವಿ ಶೆಟ್ಟಿ ಇವರಿಗೆ 3 ಚಿನ್ನದ ಪದಕ 1 ಬೆಳ್ಳಿಯ ಪದಕ ವನ್ನು ಪಡೆದು ರಾಜ್ಯ ಹಾಗೂ ಉಡುಪಿ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ ಹಾಗೂ ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿ ಇವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಕರ್ನಾಟಕದ ಪ್ರಸಿದ್ಧ ಕರಾಟೆ ಸಂಸ್ಥೆ ಯಾದ ಬುಡೋಕಾನ್ ಕರಾಟೆ ಹಾಗೂ ಸ್ಪೋರ್ಟ್ಸ್ ಅಸೋಸಿಯೇಷನ್ ಸಂಸ್ಥೆಯ ಮುಖ್ಯ ಶಿಕ್ಷಕರಾದ ವಾಮನ್ ಪಾಲನ್ ಇವರಲ್ಲಿ ತರಬೇತಿ ಪಡೆದುಕೊಂಡಿರುತ್ತಾರೆ.

ಇವರು ಉಡುಪಿಯ ಬಡಗುಬೆಟ್ಟು ಚಿಪ್ಪಾಡಿ ಗ್ರಾಮದ ವಿಜಯ ಶೆಟ್ಟಿ ಮತ್ತು ದೀಪಾ ಶೆಟ್ಟಿ ಇವರ ಪುತ್ರಿ ಆಗಿರುತ್ತಾರೆ.

