Blog

ಮುಂಡ್ಲಿ ಶಾಲೆಯಲ್ಲಿ ಗುರು ಚರಣಕೆ ನಮನ ಕಾರ್ಯಕ್ರಮ

ಆ. 7 : ಮುಂಡ್ಲಿ ಶಾಲೆಯಲ್ಲಿ ಗುರುಚರಣಕೆ ನಮನ ಕಾರ್ಯಕ್ರಮ

 

ಕಾರ್ಕಳ : ಜಾರ್ಕಳ ಮುಂಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಆ. 7 ರಂದು ಶಾಲಾ ಸಭಾಂಗಣದಲ್ಲಿ ಗುರುಚರಣಕೆ ನಮನ ಕಾರ್ಯಕ್ರಮ ನಡೆಯಲಿದೆ.

 

ಬೆಳಿಗ್ಗೆ 9 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಎಸ್ ಡಿಎಂಸಿ ಅಧ್ಯಕ್ಷ ಅಶೋಕ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಲೆಕ್ಕಪರಿಶೋಧಕ ಕಮಲಾಕ್ಷ ಕಾಮತ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಕಾರ್ಕಳದ ಜಗದೀಶ್ ಹೆಗ್ಡೆ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ರತ್ಮಮ್ನ ಎಸ್‌. ಬಿ., ಎಸ್ ಡಿಎಂಸಿ ಉಪಾಧ್ಯಕ್ಷೆ ಸವಿತ ಲಕ್ಷ್ಮಣ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಜ್ವಲ್ ಕುಮಾರ್ ಜೈನ್ ಭಾಗಿಯಾಗಲಿದ್ದಾರೆ.

 

ಕಾರ್ಯಕ್ರಮದಲ್ಲಿ ಶಾಲಾ ಪ್ರಾರಂಭದ ದಿನಗಳಲ್ಲಿ ಕರ್ತವ್ಯ ನಿರ್ವಹಿಸಿದ ಟಿ. ಶಂಕರ್ ಡೊಂಗ್ರೆ ಅವರಿಗೆ ಗೌರವಾರ್ಪಣೆ, ಶಿಕ್ಷಕರಿಗೆ – ಅಂಗನವಾಡಿ ಕಾರ್ಯಕರ್ತೆಯರಿಗೆ ಅಭಿನಂದನೆ ನಡೆಯಲಿದೆ. ಲೆಕ್ಕಪರಿಶೋಧಕ ಕೆ. ಕಮಲಾಕ್ಷ ಕಾಮತ್ ಅವರಿಂದ ಶೈಕ್ಷಣಿಕ ಸಂವಾದ ನಡೆಯಲಿದೆ.

Related posts

ಮೇಘ ಸ್ಫೋಟದ ಪ್ರದೇಶಕ್ಕೆ ಮುನಿಯಾಲು ಉದಯ ಶೆಟ್ಟಿ ಭೇಟಿ

Madhyama Bimba

ಖಾಸಗಿ ವಾಹಿನಿಯ ರಹಸ್ಯ ಕಾರ್ಯಾಚರಣೆ – ಮೂವರು ಪೊಲೀಸ್ ಅಧಿಕಾರಿಗಳ ತಲೆದಂಡ

Madhyama Bimba

ಉಡುಪಿ ಜಿಲ್ಲೆಯಲ್ಲಿ ನಾಳೆ ಶನಿವಾರ ಶಾಲೆಗಳಿಗೆ ರಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More