ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ರಾಜಂದೈವ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಸೋಣದ ಕೋಲ ನಡೆಯುವ ವಿಚಾರದಲ್ಲಿ ಸಂಪ್ರದಾಯ ಮುರಿಯುವುದನ್ನು ವಿರೋಧಿಸುವುದಾಗಿ ವಾಲ್ಪಾಡಿ ಗ್ರಾಮಸ್ಥ, ಸಾಮಾಜಿಕ ಕಾರ್ಯಕರ್ತ ಜೋಗೊಟ್ಟು ಗಣೇಶ್ ಗೌಡರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಈಗಾಗಲೇ ಗರಡಿಯಲ್ಲಿ ಹಾಕಲಾದ ಬೀಗವನ್ನು ಒಡೆದು ಸೋಣದ ಕೋಲ ನಾಳೆ(ಸೆ.13) ನಡೆಯಲಿರುವುದಾಗಿ ತಿಳಿದುಬಂದಿದೆ. ಆದರೆ ಬೀಗ ಮುರಿಯುವ ಪ್ರಕ್ರಿಯೆ ನಡೆಸಿ ಕೋಲ ನಡೆಸುವುದು ಸರಿಯಲ್ಲ. ಈ ಪ್ರಕ್ರಿಯೆ ನಡೆದರೆ ಗರಡಿಗೆ ಸಂಬಂಧಿಸಿದ ಸಂಪ್ರದಾಯ ಮುರಿಯಲಿದೆ. ಆದ್ದರಿಂದ ಸೋಣದ ಕೋಲ ನಡೆಸಬಾರದಾಗಿ ತಿಳಿಸಿದರು. ಈ ಕೋಲಕ್ಕೆ ಗರಡಿಯ ಮೂಲ ಅಸ್ರಣ್ಣರು, ಮೂಲ ಭಂಡಾರ ಬರದೇ ದೈವಸ್ಥಾನದಲ್ಲಿ ಕೋಲ ನಡೆಯುವುದು ಸಂಪ್ರದಾಯ ವಿರೋಧಿ ಎಂದು ಅಭಿಪ್ರಾಯಪಟ್ಟಿದ್ದಾರೆ.
