ಮೂಡುಬಿದಿರೆ

ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಜೂ. 21ರಂದು ಆಚರಿಸಲಾಯಿತು.

ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ವಿಭಾಗದ ಡಾ. ರೂಪ ಕಾರ್ಯಕ್ರಮ ಉದ್ಘಾಟಿಸಿದರು.


ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ವಿಭಾಗದ ಡಾಕ್ಟರ್‌ಗಳಾದ ರೂಪಾ, ಅಲೀನಾ, ಅಮೂಲ್ಯ ಮತ್ತು ಗೌತಮಿ ಇವರು ಸುಮಾರು ಒಂದುವರೆ ಗಂಟೆಗಳ ಅವಧಿಯ ಯೋಗಾಸನ ಚಟುವಟಿಕೆಗಳ ವಿವರಣೆ ಹಾಗೂ ಪ್ರದರ್ಶನದ ಮೂಲಕ ಮಕ್ಕಳಿಗೆ ತರಬೇತಿ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ತಿಲಕಾ ಅನಂತವಿರ ಜೈನ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಹಿರಿಯ ಸಂಯೋಜಕ ಗಜಾನನ ಮರಾಠೆ ಆಡಳಿತಾಧಿಕಾರಿ ಪ್ರಫುಲ್ ಡಿಸೋಜ, ಸಂಸ್ಥೆಯ ಯೋಗ ಶಿಕ್ಷಕಿ ಸುಚರಿತ, ಯನ್‌ಸಿಸಿ ವಿಭಾಗದ ಮೇಲ್ವಿಚಾರಕಿ ಪ್ರೀತಿಕಾ, ಸಂಯೋಜಕರು ಮತ್ತು ಅಧ್ಯಾಪಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಸಂಸ್ಥೆಯ ಎನ್ ಸಿ ಸಿ, ಇಂಟರಾಕ್ಟ್ ಮತ್ತು ಸ್ಕೌಟ್ ಗೈಡ್ಸ್ ಘಟಕದ ಸುಮಾರು ೨೦೦ ವಿದ್ಯಾರ್ಥಿಗಳು ಈ ಆಚರಣೆಯಲ್ಲಿ ಪಾಲ್ಗೊಂಡರು.

Related posts

ಕಲ್ಲಬೆಟ್ಟು ಸೇವಾ ಸಹಕಾರ ಸಂಘದ ಮಹಾಸಭೆ- ಆರ್ಥಿಕ ಬಲವರ್ಧನೆಗೆ ಸದಸ್ಯರ ಸಲಹೆ

Madhyama Bimba

ಮೂಡುಬಿದಿರೆ ಯುವ ಬಂಟರ ಸಂಘದ ಕಾರ್ಯಕಾರಿ ಸಭೆ- ಗ್ರಾಮ ಗ್ರಾಮಗಳಲ್ಲಿ ಸಮಾಜವನ್ನು ಸಂಘಟಿಸಲು ಯುವ ಬಂಟರ ನಿರ್ಧಾರ

Madhyama Bimba

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ‘ಪಶ್ಚಿಮ ಘಟ್ಟಗಳ ಸಸ್ಯ ವೈವಿಧ್ಯತೆ’ ಕುರಿತು ಜಾಗೃತಿ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More