ಬಜಗೋಳಿಯ ಶ್ರೀ. ಶ್ರೀನಿವಾಸ ಸ್ಟೋನ್ ಕ್ರಷರ್‌ನ ಮಾಲೀಕ ಹಾಗೂ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷರಾದ ಡಾ . ರವೀಂದ್ರ ಶೆಟ್ಟಿಯವರ ವಿರುದ್ಧ ತೇಜೋವಧೆ ಮಾಡುವ ವಿಡಿಯೋ ಪ್ರಸಾರ ಮಾಡದಂತೆ ನ್ಯಾಯಾಲಯ ತಡೆಯಾಜ್ನೆ ನೀಡಿದೆ.
ವಿಜಯೇಂದ್ರ ಎನ್ನುವವರು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಮೆಟಾ ಪ್ಲಾಟ್‌ಫಾರ್ಮ್, ಯೂಟ್ಯೂಬ್ ಹಾಗೂ ಗೂಗಲ್‌ಗಳಲ್ಲಿ ಅವಹೇಳನಕಾರಿ ವಿಡಿಯೋಗಳನ್ನು ಮಾಡಿ ಪ್ರಸಾರ ಮಾಡಿದ್ದು, ಅವರ ವಿರುದ್ಧ ರವೀಂದ್ರ ಶೆಟ್ಟಿಯವರು ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಲಯ ಕಾರ್ಕಳದಲ್ಲಿ ಮೂಲದಾವೆ ನಂಬ್ರ. 117/2026ರಂತೆ ದಾವೆಯನ್ನು ದಾಖಲಿಸಿದ್ದರು.
ಮಾನ್ಯ ನ್ಯಾಯಾಲಯವು ಸದ್ರಿ ಅವಹೇಳನಕಾರಿ ವಿಡಿಯೋಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಡಿಲೀಟ್ ಮಾಡಬೇಕಾಗಿ ಹಾಗೂ ಮುಂದಿನ ಆದೇಶದವರೆಗೆ ಯಾವುದೇ ಅವಹೇಳನಕಾರಿ ವಿಡಿಯೋಗಳನ್ನು ಪ್ರಸಾರ ಮಾಡಬಾರದಾಗಿ ದಿನಾಂಕ 28-08-2026ರಂದು ತಡೆಯಾಜ್ಞೆಯನ್ನು ನೀಡಿರುತ್ತದೆ.
ಈ ಬಗ್ಗೆ ಪ್ರತಿವಾದಿಗಳಿಗೆ ನೋಟೀಸು ಕೂಡಾ ಜಾರಿಯಾಗಿರುತ್ತದೆ. ಒಂದು ವೇಳೆ ಮಾನ್ಯ ನ್ಯಾಯಾಲಯದ ಆದೇಶ ಉಲ್ಲಂಘಿಸಿದಲ್ಲಿ ಸಂಬಂಧಪಟ್ಟ ಎಲ್ಲರ ವಿರುದ್ಧ ಮಾನ್ಯ ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ರವೀಂದ್ರ ಶೆಟ್ಟಿಯವರು ಹೇಳಿರುತ್ತಾರೆ.
ಡಾ. ರವೀಂದ್ರ ಶೆಟ್ಟಿಯವರ ಪರವಾಗಿ ನ್ಯಾಯವಾದಿ ಮುರಳೀಧರ ಭಟ್ ವಾದಿಸಿದ್ದರು.
