ಕಾರ್ಕಳಹೆಬ್ರಿ

ಬೈಲೂರು ಗಾಂಧಿಸ್ಮಾರಕ ಭವನದಲ್ಲಿ ಸಾರ್ವಜನಿಕ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗಾಂಧಿ ಸ್ಮಾರಕ ಭವನ ನೀರೆಬೈಲೂರು ಇಲ್ಲಿ 46ನೇ ವರ್ಷದ ಶ್ರೀ ಗಣೇಶೋತ್ಸವವು. ಸೆ. 14 ಮತ್ತು 15ರಂದು ನಡೆಯಲಿದೆ.

ಸೆ. 14ರಂದು 10.00 ಗಂಟೆಗೆ ಪ್ರತಿಷ್ಠೆ, ಗಣಹೋಮ ಹಾಗೂ ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 2.00ರಿಂದ 1ರಿಂದ 7ನೇತರಗತಿಯ ಶಾಲಾ ಮಕ್ಕಳಿಗೆ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಭಕ್ತಿಗೀತೆ ಸ್ಪರ್ಧೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ಆಟೋಟ ಸ್ಪರ್ಧೆಗಳು ನಡೆಯಲಿದೆ. ಸಂಜೆ 3.00ರಿಂದ ಬೈಲೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಸಂಜೆ 5.30ರಿಂದ ಬೈಲೂರು ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಂತರ ರಂಗಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಂಗತರಂಗ ಕಲಾವಿದರು ಕಾಪು ಇವರಿಂದ ಶೋಬಾಜಿ ನಾಟಕ ಪ್ರದರ್ಶನಗೊಳ್ಳಲಿದೆ.

ಸೆ. 15ರಂದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಕಾಶ್ ಮಾಧವನ್ ಹಾಗೂ ರೂಪಾ ಪ್ರಕಾಶ್ ಮಾಧವನ್ ಸಾರಥ್ಯದಲ್ಲಿ ಸ್ಟಾರ್ ಧಮಾಕಾ ಸಂಗೀತ ರಸಮಂಜರಿ ಮತ್ತು ಆರ್ಯನ್ ಡ್ಯಾನ್ಸ್ ಸ್ಟುಡಿಯೋ ತಂಡದಿಂದ ಅಮೋಘ ನೃತ್ಯ ಪ್ರದರ್ಶನ ನಡೆಯಲಿದೆ. ಸಂಜೆ 6.00ಕ್ಕೆ ವಿಸರ್ಜನಾ ಪೂಜೆ ನಡೆದು ವಿಸರ್ಜನಾ ಮೆರವಣಿಗೆ ನಡೆಯಲಿದೆ.

Related posts

ನಾರಾವಿ ಮಹಾ ಚಂಡಿಕಾ ಯಾಗ -2024: ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

Madhyama Bimba

ಕರಾವಳಿ ರಂಗಾಯಣವೇ ಸರಿಯಾದ ಮತ್ತು ಸೂಕ್ತ ಹೆಸರು. ಬಿವಿಕಾರಂತರ ಅಪೇಕ್ಷೇಯು ಅದೇ ಆಗಿತ್ತು – ಶುಭದರಾವ್ ಕಾರ್ಕಳ

Madhyama Bimba

ನೀರೆ: ಶ್ರೀ ಬನಶಂಕರಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More