Blog

ಬೈಕ್ ಕಾರು ಅಪಘಾತ

ಪ್ರತೀಕ್ (24), ಮುಲ್ಕಿ ಇವರು ದಿನಾಂಕ 20/10/2024 ರಂದು ಅವರ ಸ್ನೇಹಿತ ಕಿರಣ್ ಇವರೊಂದಿಗೆ KA-20-EU-2411 ನೇ ನಂಬ್ರದ ಮೋಟಾರ್ ಸೈಕಲ್‌‌ನಲ್ಲಿ ಸಹ ಸವಾರರನ್ನಾಗಿ ಗ ಕುಳ್ಳಿರಿಸಿ ಕೊಂಡು ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಹಾರ್ಜೆಡ್ಡು ಕ್ರಾಸ್ ಎಂಬಲ್ಲಿ ಕಾರ್ಕಳ ಕಡೆಗೆ ಬರಲು 14:15 ಗಂಟೆಗೆ ಬರುತ್ತಿರುವಾಗ KA-20-MC-7418ನೇ ನಂಬ್ರದ ಕಾರನ್ನು ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿ ಕೊಂಡು ಬಂದು ಮೋಟಾರ್ ಸೈಕಲ್‌‌ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ.

ಈ ಪರಿಣಾಮ ಮೋಟಾರ್ ಸೈಕಲ್ ಸವಾರ ಕಿರಣ್ ಇವರ ತಲೆ ಹಾಗೂ ಕೈ ಕಾಲುಗಳಿಗೆ ಗಂಭಿರ ಸ್ವರೂಪದ ಗಾಯವಾಗಿರುತ್ತದೆ.  ಹಿಂಬದಿ ಸವಾರನಿಗೆ ಕೈ ಕಾಲಿಗೆ ತರಚಿದ ಗಾಯವಾಗಿರುತ್ತದೆ . ಗಾಯಾಳುಗಳು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಷಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಆಸ್ಪತ್ರೆಗೆ ಹೋಗಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 173/2024 ಕಲಂ: 281 125 (A) 125(B) BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ

Related posts

ಪತ್ರಕರ್ತರಿಗೆ ಸರಕಾರಿ ಸವಲತ್ತು  ನೀಡಿ – ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಮನವಿ ಸಲ್ಲಿಸಿದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ

Madhyama Bimba

ಅಂಬೇಡ್ಕರ್ ಅವಹೇಳನ ಬಗ್ಗೆ ಬಿಜೆಪಿ ಮಾತನಾಡಲೇ ಇಲ್ಲ

Madhyama Bimba

ಮಿಯ್ಯಾರು ಕಂಬಳ ಪ್ರದೇಶದಲ್ಲಿ ತ್ಯಾಜ್ಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More