ಕಾರ್ಕಳ: ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಹಕಾರಿ ಕ್ಷೇತ್ರವು ಇಂದು ಸಹಕಾರ ಕ್ಷೇತ್ರ ಮಾತ್ರವಲ್ಲದೆ ಎಲ್ಲಾ ಕ್ಷೇತ್ರದಲ್ಲಿ ಬೆಳೆದು ನಿಂತಿದೆ. ಸದಸ್ಯರಿಂದ ಸದಸ್ಯರಿಗಾಗಿ ಸದಸ್ಯರಿಗೋಸ್ಕರ ಎಂಬ ತತ್ವದಂತೆ ಕೇವಲ ಲಾಭ ಗಳಿಸುವ ಉದ್ದೇಶ ಮಾತ್ರವಲ್ಲದೆ ಗಳಿಸಿದ ಲಾಭವನ್ನು ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲು ಬಳಸಿಕೊಳ್ಳುವುದು ಕೂಡ ಅತೀ ಮುಖ್ಯ ಎಂದು ವಿಕಾಸ ವಿವಿದೋದ್ಧೇಶ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷರಾದ ಬೋಳ ಸದಾಶಿವ ಶೆಟ್ಟಿಯವರು ಹೇಳಿದರು.

ಅವರು ಸೆ. 12ರಂದು ಕಾರ್ಕಳದ ಪ್ರಕಾಶ್ ಹೊಟೇಲಿನ ಸಂಭ್ರಮ ಹಾಲ್‌ನಲ್ಲಿ ನಡೆದ ವಿಕಾಸ ವಿವಿದೋದ್ಧೇಶ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ವಾರ್ಷಿಕ ಮಹಾಸಭೆಯಲ್ಲಿ ಕಾಯ್ದೆಯಂತೆ ಎಲ್ಲಾ ನಿರ್ಣಯಗಳಿಗೆ ಮಂಜೂರಾತಿಯನ್ನು ಪಡೆಯಲಾಯಿತು.
ಸಹಕಾರಿಯಿಂದ ಕ್ಯಾನ್ಸರ್ ಪೀಡಿತ ಗ್ರಾಹಕ ಬಂಧುಗಳಿಗೆ ಸಹಾಯಧನ ವಿತರಣೆಯನ್ನು ನೆರವೇರಿಸಲಾಯಿತು.
ನಿರ್ದೇಶಕರಾದ ನವೀನ್‌ಚಂದ್ರ ಜೈನ್, ವಿಜಯ ಶೆಟ್ಟಿ, ಜಯರಾಮ್ ಸಾಲ್ಯಾನ್, ಕೆ ಮಾಧವ, ಶ್ರೀಮತಿ ಶೋಭ ಆರ್ ದೇವಾಡಿಗ, ಶ್ರೀಮತಿ ಸುರೇಖಾ ಪ್ರದೀಪ್, ರಮೇಶ್ ಹೆಗ್ಡೆ, ಚಂದ್ರ ಶೇಖರ್ ಸಪಲಿಗ, ಸುಂದರ್ ಬಿ ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ವಾರ್ಷಿಕ ವರದಿಯನ್ನು ಮಂಡಿಸಿದರು. ಸಹಕಾರಿಯ ನಿರ್ದೇಶಕರಾದ ರಾಜೇಶ್ ರಾವ್ ಸ್ವಾಗತಿಸಿದರು.
