ಕಾರ್ಕಳ ರಾಕ್ ಸಿಟಿ ಇದರ ವಾರದ ವಿಶೇಷ ಸಭೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಸಾಧಕ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಜರಗಿತು.
ವಿಶ್ರಾಂತ ಪ್ರಾಂಶುಪಾಲರಾದ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರದ ಅವಶ್ಯಕತೆಗಳನ್ನು ಮುಕ್ತವಾಗಿ ಹಂಚಿಕೊಂಡರು.
ಸಭಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಮಾರ್ಗದರ್ಶಕರಾದ ರೊ. ಡಾ. ಭರತೇಶ ಆದಿರಾಜ್ ಶಿಕ್ಷಕರ ಪಾತ್ರವನ್ನು ಶ್ಲಾಘಿಸಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆರ್ಮುಂಡೆ ಇಲ್ಲಿನ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ, ಸುಂದರ ಪುರಾಣಿಕ ಸ್ಮಾರಕ ಪ್ರೌಢಶಾಲೆ, ಪೆರುವಾಜೆ ಇಲ್ಲಿನ ದೇವುದಾಸ್ ನಾಯಕ್, ಸುಂದರ ಪುರಾಣಿಕ ಸ್ಮಾರಕ ಪ್ರಾಥಮಿಕ ಶಾಲೆ ಪೆರುವಾಜೆ ಇಲ್ಲಿನ ಶ್ರೀಮತಿ ಶಕೀಲಾ ಎಸ್ ಶೆಟ್ಟಿ ಹಾಗೂ ಚೇತನಾ ವಿಶೇಷ ಮಕ್ಕಳ ಶಾಲೆ ಕಾರ್ಕಳ ಇಲ್ಲಿನ ಶ್ರೀಮತಿ ಸುಮಿತ್ರಾರನ್ನು ಸನ್ಮಾನಿಸಲಾಯಿತು.
ವಿಶ್ರಾಂತ ಪ್ರಾಂಶುಪಾಲರಾದ ರೊ. ಶ್ರೀ ವರ್ಮ ಅಜ್ರಿ, ರೋಟರಿ ಕ್ಲಬ್ ನ ಸದಸ್ಯರಾದ ರೊ. ಬಾಲಕೃಷ್ಣ ನಾಯಕ್, ರೊ. ಉಪೇಂದ್ರ ವಾಗ್ಲೆ,, ರೊ. ಪ್ರಕಾಶ್ ವಾಗ್ಲೆ, ಹಾಗೂ ರೊ. ಸೋಮಶೇಖರ್, ನಿಕಟಪೂರ್ವ ಅಧ್ಯಕ್ಷರಾದ ರೊ.ಸುರೇಂದ್ರ ನಾಯಕ್ ಹಾಗೂ ರೊ. ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.
ಆನೆಟ್ ಶ್ರುತಿ ಕೃಷ್ಣಪ್ಪರವರು ಪ್ರಾರ್ಥಿಸಿದರು. ರೊ. ಮಾಧವಿಯವರು ರೋಟರಿ ಮಾಹಿತಿ ನೀಡಿದರು. ರೊ.ಸುಬ್ರಹ್ಮಣ್ಯ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರೊ.ಗಣೇಶ್ ಬರ್ಲಾಯ ವಂದಿಸಿದರು.
