ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ವಾರ್ಷಿಕ ಮಹಾಸಭೆಯು ಸೆ.20ರಂದು ಶಿರ್ತಾಡಿ ಶ್ರೀ ಬ್ರಹ್ಮ ರೆಸಿಡೆನ್ಸಿಯ ಶ್ರೀಮತಿ ಶಾಂಭವಿ ಐತಪ್ಪ ಶೆಟ್ಟಿ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಎಸ್. ಪ್ರವೀಣ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ಗ್ರಾಮದ ಕೃಷಿಕರಾದ ಲಕ್ಷ್ಮಣ್ ಕೋಟ್ಯಾನ್, ಜೇಸನ್ ವಿಟಲಿಸ್ ಲೋಬೋ, ಶ್ರೀನಿವಾಸ ಮೊಗೆರಾಯ, ಧರ್ಮರಾಜ ಭಂಗ, ಆನಂದ ಶೆಟ್ಟಿ ಮತ್ತು ಅಣ್ಣ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮಸ್ಥರಾದ ಕೃಷ್ಣ ಭಟ್, ಸೋಮನಾಥ ಶಾಂತಿ, ಜಯಾನಂದ ಶೆಟ್ಟಿ, ಲಕ್ಷ್ಮೀನಾರಾಯಣ ಭಟ್, ಭೋಜರಾಜ ಭಟ್, ನಾಗರಾಜ ಭಟ್ ಅವರು ಸಂಘ ಕಳೆದ ಒಂದು ವರ್ಷದ ಅವಧಿಯಲ್ಲಿ ತೋರಿದ ಸಾಧನೆಯನ್ನು ಶ್ಲಾಘಿಸಿದರು. ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಸ್ತಿತ್ವ ಪಡೆದುಕೊಂಡು ಸ್ವಲ್ಪ ಅವಧಿಯಲ್ಲಿ 10.34 ಲಕ್ಷ ರೂಪಾಯಿ ಲಾಭ ಪಡೆದುಕೊಂಡು ಶೇಕಡ ಐದರ ಲಾಭಾಂಶ ವಿತರಣೆಗೆ ನಿರ್ಧಾರ ಕೈಗೊಳ್ಳಲಾಯಿತು. 39.39 ಕೋಟಿ ರೂಪಾಯಿ ವ್ಯವಹಾರ ನಡೆಸಿ 7.38 ಕೋಟಿ ರೂಪಾಯಿ ದುಡಿಯುವ ಬಂಡವಾಳ ಹೊಂದಿದೆ ಎಂದು ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ತಿಳಿಸಿದರು.
ಸಭೆಯಲ್ಲಿ ಇನ್ನೊವಿಷನ್ ಕೇಬಲ್ ನೆಟ್ವರ್ಕ್ ವತಿಯಿಂದ ಅದರ ಮಾಲಕರಾದ ಚಿಂತನ್ ಸಿಲ್ವನ್ ಲೋಬೋ ಹಾಗೂ ಜೇಸನ್ ಮಿರಾಂಡಾ ಅವರು ಸಂಘದ ಅಧ್ಯಕ್ಷರ ಮೂಲಕ ವಾಟರ್ ಪ್ಯೂರಿಫೈರ್ ಕೊಡುಗೆಯಾಗಿ ನೀಡಿದರು.
ಸಂಘದ ಲೆಕ್ಕಪರಿಶೋಧಕರಾಗಿ ಚಂದ್ರಶೇಖರ ಭಟ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾದ ಚಿಂತನ್ ಸಿಲ್ವನ್ ಲೋಬೋ ಸ್ವಾಗತಿಸಿದರು. ನಿರ್ದೇಶಕರಾದ ರಾಘವ ಪಿ ಸುವರ್ಣ, ತಾರಾನಾಥ ಶೆಟ್ಟಿ, ಉಮೇಶ್ ನಾಯ್ಕ, ಸದಾನಂದ ಸುವರ್ಣ, ಸುದೀಪ್, ಕೆ ಎಚ್ ಲಕ್ಷ್ಮಣ, ಸನತ್ ಶೆಟ್ಟಿ, ಅಬ್ದುಲ್ ಖಾದರ್, ಶ್ರೀಮತಿ ಸುಗಂಧಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಸಂಜಯ್ ಅತಿಕಾರಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಿಮಲಾಜಿ ಉಪಸ್ಥಿತರಿದ್ದರು.
ಸುಚೇತ ಪ್ರಾರ್ಥನೆ ಗೈದರು. ಸಿಬ್ಬಂದಿ ಅಶ್ವಿನಿ ಸನ್ಮಾನಿತರನ್ನು ಪರಿಚಯಿಸಿದರು. ಶ್ರೀಮತಿ ಸುಗಂಧಿ ಧನ್ಯವಾದವಿತ್ತರು. ವಿಶೇಷ ಕರ್ತವ್ಯ ಅಧಿಕಾರಿ ಯು ಶೇಖ್ ಲತೀಫ್ ನಿರೂಪಿಸಿದರು. ಸಿಬ್ಬಂದಿಗಳಾದ ದೇವಿಪ್ರಸಾದ್ ಶೆಟ್ಟಿ, ಮೋಕ್ಷ, ಅಕ್ಷಯ್ ದೇವದಾಸ್ ಪೂಜಾರಿ ಕಾರ್ಯಕ್ರಮದಲ್ಲಿ ಸಹಕರಿಸಿದರು.
