ಕಾರ್ಕಳಹೆಬ್ರಿ

ಕಡ್ತಲ: ವರ್ಗಾವಣೆಗೊಂಡ ಪಿಡಿಓ ಸುರೇಖಾರವರಿಗೆ ಅಭಿನಂದನಾ ಸಮಾರಂಭ

ಕಡ್ತಲ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿಯಾಗಿ 2 ವರ್ಷಗಳ ಕಾಲ ಪ್ರಭಾರ ಸೇವೆ ಸಲ್ಲಿಸಿ ಇದೀಗ ಹೆಬ್ರಿ ತಾಲೂಕಿನ ಚಾರ ಪಂಚಾಯತ್‌ಗೆ ವರ್ಗಾವಣೆಗೊಂಡ ಸುರೇಖಾರವರನ್ನು ಅಭಿನಂದಿಸಲಾಯಿತು. ಹಾಗೂ ಮರ್ಣೆ ಗ್ರಾಮ ಪಂಚಾಯತ್‌ನಿಂದ ಕಡ್ತಲ ಗ್ರಾಮ ಪಂಚಾಯತ್‌ಗೆ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ನೇಮಕಗೊಂಡ ಅಂಕಿತರವರನ್ನು ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಐ.ಪಿ.ಎಸ್ ಅಧಿಕಾರಿ ಬಿ ಸದಾಶಿವ ಪ್ರಭು, ಡಾ. ಪ್ರಮೋದ್ ಕುಮಾರ್ ಹೆಗ್ಡೆ ಕಡ್ತಲ, ಧಾರ್ಮಿಕ ಮುಖಂಡ ಪ್ರಶಾಂತ್ ಬೆಳ್ಳಿರಾಯ, ಮಂಗಳೂರು ಎಂಆರ್‌ಪಿಎಲ್ ವ್ಯವಸ್ಥಾಪಕರಾದ ಅಶೋಕ್ ಕುಮಾರ್ ಹೆಗ್ಡೆ, ಲಕ್ಷ್ಮೀ ಜನಾರ್ದನ ದೇವಸ್ಥಾನದ ಟ್ರಸ್ಟಿ ಮುಂಡಾರು ಪ್ರಸನ್ನ ಕುಮಾರ್ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕೇಶ್ ಕುಮಾರ್ ಹೆಗ್ಡೆ ಹಾಗೂ ಪಂಚಾಯತ್ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ವಿನೀತ್ ಹೆಗ್ಡೆ ಹಾಗೂ ದೀಪಕ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಅರುಣ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ಸತೀಶ್ ಪೂಜಾರಿ ವಂದಿಸಿದರು.

Related posts

ಕಾರ್ಕಳ ಹೂವಿನ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಫ್ರಾನ್ಸಿಸ್ ಡಿಸೋಜ

Madhyama Bimba

ಸಾಣೂರು ಯುವಕ ಮಂಡಲ ವತಿಯಿಂದ ಜೂ. 14ರಂದು ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

Madhyama Bimba

ನಾಡ್ಪಾಲು ಗ್ರಾಮದಲ್ಲಿ ಹುಲಿ, ಚಿರತೆಗಳ ಉಪಟಳ: ಸಾಕು ಪ್ರಾಣಿಗಳಿಗಿಲ್ಲ ರಕ್ಷಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More